Advertisement
ಸೋಮವಾರ ನಾಮಪತ್ರ ಹಿಂಪ ಡೆಯಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಮಂದಿ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 21 ಮಹಿಳಾ ಅಭ್ಯರ್ಥಿಗಳಿದ್ದರೆ, 226 ಪುರುಷ “ಕಲಿ’ಗಳು ಕಣದಲ್ಲಿದ್ದಾರೆ.
Related Articles
ಎಸ್.ಎಂ. ಕೃಷ್ಣ ಪುರಸ್ಕೃತ
ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಸಿದ್ದ ರಾಹುಲ್ ಗಾಂಧಿ ಎನ್. ಎಂಬವರ ನಾಮಪತ್ರ ತಿರಸ್ಕೃತಗೊಂಡಿದೆ. ಇದೇ ಕ್ಷೇತ್ರದಿಂದ ಎಸ್.ಎಂ. ಕೃಷ್ಣ ಎಂಬವರು ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ಪುರಸ್ಕೃತಗೊಂಡಿದೆ.
Advertisement
ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿಎನ್. ಮಂಜುನಾಥ್ ಎದುರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮಂಜುನಾಥ್ ಕೆ., ಮಂಜುನಾಥ್ ಎನ್., ಮಂಜುನಾಥ್ ಸಿ. ಕಣದಿಂದ ಹಿಂದೆ ಸರಿದಿದ್ದು, ಬಹುಜನ ಭಾರತ ಪಕ್ಷದ ಮಂಜುನಾಥ ಸಿ.ಎನ್. ಎಂಬವರು ಕಣದಲ್ಲಿದ್ದಾರೆ.ಬೆಂಗಳೂರು ದಕ್ಷಿಣದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸ್ಪರ್ಧೆಗಿಳಿದಿದ್ದು, ಅವರ ನಾಮಪತ್ರ ಸಿಂಧುವಾಗಿದೆ. ಇನ್ನು ಕೋಲಾರದಲ್ಲಿ ಸೋಶಿಯಲಿಸ್ಟ್ ಪಕ್ಷ (ಇಂಡಿಯಾ)ದ ಡಿ. ಗೋಪಾಲಕೃಷ್ಣ ಅದೃಷ್ಟ ಪರೀಕ್ಷೆಗಿಳಿದಿದ್ದು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಕರ್ನಾಟಕ) ತಿಮ್ಮರಾಯಮ್ಮ ನಾಮಪತ್ರವೂ ಮಾನ್ಯವಾಗಿದೆ. ಎಂ.ಎಸ್. ಬದರಿನಾರಾಯಣ ಎಂಬವರು ಲೋಕಶಕ್ತಿ ಪಕ್ಷದಿಂದಲೂ ನಾಮಪತ್ರ ಸಲ್ಲಿಸಿದ್ದು, ಪಕ್ಷೇತರರಾಗಿ ಸಲ್ಲಿಸಿರುವ ನಾಮಪತ್ರವೂ ಪುರಸ್ಕೃತವಾಗಿದೆ.