ಲಕ್ನೋ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎ.10ರಂದು ತಮ್ಮ ಪಕ್ಷದ ಭದ್ರಕೋಟೆಯಾಗಿರುವ ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸಲು ನಾಮ ಪತ್ರ ಸಲ್ಲಿಸಲಿದ್ದಾರೆ.
ರಾಹುಲ್ ಅವರ ತಾಯಿ,ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಎ.11ರಂದು ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲಿದ್ದಾರೆ.
ರಾಹುಲ್ ಅವರು ಅಮೇಠಿ ಮಾತ್ರವಲ್ಲದೆ ಕೇರಳದ ವಯನಾಡ್ ಕ್ಷೇತ್ರದಿಂದಲೂ ಲೋಕಸಭೆಗೆ ಸ್ಪರ್ಧಿಸಲಿದ್ದು ಆ ಸಂಬಂಧ ನಿನ್ನೆ ಗುರುವಾರ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
48ರ ಹರೆಯದ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಬಿಜೆಪಿ ನಾಯಕಿ, ಕೇಂದ್ರ ಜವಳಿ ಖಾತೆ ಸಚಿವ Smriti Irani ಅವರು ಸ್ಪರ್ಧಿಸುತ್ತಿದ್ದಾರೆ.
Related Articles
ಕಾಂಗ್ರೆಸ್ ಕೈಯಿಂದ ಅಮೇಠಿಯನ್ನು ಕಸಿದುಕೊಳ್ಳುವಲ್ಲಿ ಇರಾನಿ ಅವರ ಎರಡನೇ ಪ್ರಯತ್ನ ಇದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಆಕೆ ರಾಹುಲ್ ಗಾಂಧಿ ಎದುರು ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರು.
2004ರಿಂದಲೂ ರಾಯ್‌ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸಿಕೊಂಡು ಬಂದಿರುವ ಯುಪಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎ.11ರಂದು ತಮ್ಮ ನಾಮಪತ್ರವನ್ನು ಸಲ್ಲಿಸುವಾಗ ಆಕೆಯ ಜತೆಗೆ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇರುತ್ತಾರೆ.
ಸೋನಿಯಾ ಗಾಂಧಿ ಎದುರು ರಾಯ್‌ಬರೇಲಿ ಕ್ಷೇತ್ರದಲ್ಲಿ ಸೆಣಸುವ ಬಿಜೆಪಿ ಅಭ್ಯರ್ಥಿ ಎಂದರೆ ಮಾಜಿ ಕಾಂಗ್ರೆಸ್ ನಾಯಕ ದಿನೇಶ್ ಪ್ರತಾಪ್ ಸಿಂಗ್. ಇವರು ಮಾಜಿ ಕಾಂಗ್ರೆಸ್ ಎಂಎಲ್‌ಸಿ ಮತ್ತು ರಾಯ್‌ಬರೇಲಿ ನಿವಾಸಿಯೂ ಹೌದು. ವರ್ಷದ ಹಿಂದಷ್ಟೇ ಇವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.