Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆಶಿಪ್ ವತಿಯಿಂದ ಕಾಮಗಾರಿ ನಡೆದಿದ್ದು, ಈ ಕಾಮಗಾರಿಯಲ್ಲಿ ನಗರದ ಹೊರವಲಯದ ಮಿನಿ ವಿಧಾನಸೌಧದಿಂದ ಬಾದಾಮಿಯ ಎಲ್‌ಐಸಿ ಕಚೇರಿವರೆಗೆ ಡಿವೈಡರ್ (ವಿಭಜಕ) ಅಳವಡಿಸಬೇಕು. ರಸ್ತೆಯ ಪಕ್ಕದಲ್ಲಿ ಚರಂಡಿ ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಡಿಪಿಆರ್ ಪ್ರಕಾರ ಡಿವೈಡರ್ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕೇಂದ್ರ ಸರಕಾರದ ಹೃದಯ ಯೋಜನೆಯಡಿ ಸೈಕಲ್ ಪಾತ್‌ಗೆ ಮೀಸಲಿರಿಸಿದ ಜಾಗೆಯನ್ನು ಕೆಶಿಪ್‌ನವರಿಗೆ ಬಿಟ್ಟು ಕೊಟ್ಟು ಡಿವೈಡರ್ ನಿರ್ಮಿಸಬೇಕು. ಸೈಕಲ್ ಪಾತ್ ಬಿಟ್ಟು ಕೊಡುವುದರಿಂದ ಒಟ್ಟು 45 ಅಡಿ 6 ಇಂಚು ರಸ್ತೆಯಾಗುವುದು. ಅಂದಾಜು ಒಂದು ಅಡಿ ಡಿವೈಡರ್ ನಿರ್ಮಾಣ ಮಾಡಿದರೆ ಎರಡೂ ಬದಿಯಲ್ಲಿ 22 ಅಡಿ 3 ಇಂಚು ರಸ್ತೆ ಲಭ್ಯವಾಗಲಿದೆ. ಇದರಿಂದ ಐತಿಹಾಸಿಕ ನಗರ ಸುಂದರವಾಗಿ ಕಾಣುತ್ತದೆ. ಇದರಿಂದ ಬಾದಾಮಿ ಜನತೆಗೆ ಪ್ರವಾಸಿಗರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು. ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಸೂಡಿ ಮಾತನಾಡಿ, ಬಾದಾಮಿ ಪಟ್ಟಣದ ರಾಮದುರ್ಗ ರಸ್ತೆಯಿಂದ ಟಾಂಗಾ ನಿಲ್ದಾಣದವರೆಗೆ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ ಮಾಡಲಾಗಿದೆ. ಪಾದಾಚಾರಿ ರಸ್ತೆ(ಫುಟ್‌ಪಾತ್) ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಡಿಪಿಆರ್ ನಲ್ಲಿ ನಮೂದಿಸಿದಂತೆ ಗುಣಮಟ್ಟದ ಹಾಸಿಗೆ ಕಲ್ಲು ಹಾಕಿಲ್ಲ. ಕಳಪೆ ಕಾಮಗಾರಿ ನಡೆಯುತ್ತಿದೆ. ಇದನ್ನು ತಡೆದ ಹೋರಾಟ ಸಮಿತಿಯವರಿಗೆ ಗುತ್ತಿಗೆದಾರರು ಹೆದರಿಸುತ್ತಿದ್ದಾರೆ. ಇದರಿಂದ ಸಮಿತಿಯವರೆಗೆ ಜೀವ ಭಯವಿದೆ ಎಂದರು.
Advertisement
ರಸ್ತೆ ವಿಭಜಕ ಅಳವಡಿಸಲು ಸಮ್ಮತಿ
05:32 PM Jun 25, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.