ಬೀದರ: ಬೀದರ ಜಿಲ್ಲಾ ಪಂಚಾಯತ್ 2020-21ನೇ ಸಾಲಿಗೆ 1150.40 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿಪಂ ವಿಶೇಷ ಸಾಮಾನ್ಯ ಸಭೆ ಅನುಮೋದನೆ ನೀಡಿದೆ. ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಶರಣಯ್ಯ ಎಸ್. ಮಠಪತಿ ಅವರು ಕ್ರಿಯಾ ಯೋಜನೆಯ ಅನುದಾನ ಮಂಡಿಸಿದರು.
ಜಿಲ್ಲಾ ಪಂಚಾಯತ್‌ನ ಎಲ್ಲ ಸದಸ್ಯರ ಒಪ್ಪಿಗೆಯೊಂದಿಗೆ ಅನುಮೋದನೆ ನೀಡಲಾಯಿತು. 2020-21ನೇ ಸಾಲಿನ ಲಿಂಕ್ ಡಾಕ್ಯುಮೆಂಟ್ ಕ್ರಿಯಾ ಯೋಜನೆಯಡಿ ಜಿಪಂ, ತಾಪಂ ಮತ್ತು ಗ್ರಾಪಂ ವೇತನ ಹಾಗೂ ವೇತನೇತರ ವೆಚ್ಚ ಕೈಗೊಳ್ಳಲು ಒಟ್ಟಾರೆ ಅನುದಾನ (ಜಿಪಂ.ನಡಿ ಬರುವ ಇಲಾಖೆಗಳ ಅನುದಾನ) 1139.31 ಕೋಟಿ ರೂ.ಗಳಿಗೆ, 2020-21ನೇ ಸಾಲಿಗೆ 15ನೇ ಹಣಕಾಸು ಆಯೋಗದ ಜಿಪಂಗೆ ಒಟ್ಟಾರೆ ಅನುದಾನ 5.35 ಕೋಟಿ ರೂ.ಗಳು ಮತ್ತು 2020-21ನೇ ಸಾಲಿಗೆ ಜಿಪಂ ಅನಿರ್ಬಂಧಿತ ಅನುದಾನ 5.74 ಕೋಟಿ ರೂ. ಸೇರಿ ಒಟ್ಟು 1150.40 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಸಭೆಯಲ್ಲಿಅನುಮೋದನೆ ಸಿಕ್ಕಿತು.
ಜು.10ರಂದು ಸುಮಾರು 24ಕ್ಕೂ ಹೆಚ್ಚು ಸದಸ್ಯರು ತಮ್ಮ ಕ್ಷೇತ್ರದ ಬಾಕಿ ಅನುದಾನ ಹಾಗೂ ಇತರ ವಿಷಯ ಕುರಿತು ಸಹಿ ಮಾಡಿದ ಪತ್ರ ನೀಡಿದ್ದೇವೆ. ಅದಕ್ಕೆಒಪ್ಪಿಗೆ ನೀಡಿದರೆ ಮಾತ್ರ ಬಜೆಟ್‌ಗೆ ಅನುಮೋದನೆನೀಡಲಾಗುವುದು ಎಂದು ಸದಸ್ಯ ವಿಜಯಕುಮಾರ ಪಾಟೀಲ ಗಾದಗಿ ಸಭೆಗೆ ತಿಳಿಸಿದರು. ಈ ಮಧ್ಯೆ ಅಧ್ಯಕ್ಷೆ ಗೀತಾ ಚಿದ್ರಿ ಸದಸ್ಯರನ್ನು ಸಮಾಧಾನಪಡಿಸಿ ಮೊದಲು ಬಜೆಟ್‌ಗೆ ಅನುಮೋದನೆ ನೀಡೋಣ. ನಂತರ ಪತ್ರದ ಬಗ್ಗೆ ಚರ್ಚೆ ಮಾಡೋಣ ಎಂದರು.
ಸದಸ್ಯರ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಅಂದರೆ ಅಧ್ಯಕ್ಷರೇ ಎಲ್ಲವು ಮಾಡಿಕೊಳ್ಳಲಿ ನಾವು ಹೊರಗೆಹೋಗೋಣ ಎಂದು ಬಹುತೇಕ ಸದಸ್ಯರು ಪಟ್ಟುಹಿಡಿದರು. ಬಜೆಟ್ ಕುರಿತಂತೆ ಈಗಾಗಲೇ ಎರಡೂ¾ರು ಸಲ ಸಭೆ ಮುಂದೂಡಲಾಗಿದೆ ಬಜೆಟ್ ಲ್ಯಾಪ್ಸ್ ಆಗಬಾರದು ಎಂಬ ಉದ್ದೇಶದಿಂದ ನಾವು ಸಭೆಗೆ ಆಗಮಿಸಿದ್ದೇವೆ ಎಂದು ಪ್ರಕಾಶ ಪಾಟೀಲ ಹೇಳಿದರು.
ಶ್ರದ್ಧಾಂಜಲಿ: ಸಭೆ ಆರಂಭಕ್ಕೆ ಮೊದಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಜಿಪಂ ಸದಸ್ಯ ಅನಿಲ ಗುಂಡಪ್ಪ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಎರಡು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಪಂ ಉಪಾಧ್ಯಕ್ಷ ಲಕ್ಷ್ಮಣ ಬುಳ್ಳಾ, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್., ಸದಸ್ಯರು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು