Advertisement

ಮರಾಠರಿಗೆ ಶೇ.16 ಮೀಸಲಾತಿಗೆ ಅಂಗೀಕಾರ

11:36 AM Nov 30, 2018 | Team Udayavani |

ಮುಂಬಯಿ: ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮರಾಠರಿಗೆ ಶೇ. 16ರಷ್ಟು ಮೀಸಲಾತಿ ದಗಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಗುರುವಾರ ಅನುಮೋದಿಸಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗದಲ್ಲಿ ಇನ್ನು ಮರಾಠರಿಗೆ ಮೀಸಲಾತಿ ಸಿಗಲಿದ್ದು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿ ಆಧಾರದಲ್ಲಿ ಮಸೂದೆ ರೂಪಿಸಲಾಗಿದೆ. ಮರಾಠರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಇವರಿಗೆ ಸರಕಾರದ ನೆರವು ಅಗತ್ಯವಿದೆ ಎಂದು ಮಸೂದೆ ಮಂಡಿಸಿದ ಸಿಎಂ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ. ಮಸೂದೆ ಅವಿರೋಧವಾಗಿ ಅನುಮೋದನೆಗೊಂಡಿದೆ.

Advertisement

ರಾಜ್ಯದಲ್ಲಿ ಶೇ. 30ರಷ್ಟು ಮರಾಠರಿದ್ದಾರೆ. ರಾಜಕೀಯ ವಲಯದಲ್ಲಿ ಪ್ರಭಾವ ಹೊಂದಿರುವ ಮರಾಠರು ಕಳೆದ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಆಗಲೇ ಮೀಸಲಾತಿ ಘೋಷಿಸುವುದಾಗಿ ಫ‌ಡ್ನವೀಸ್‌ ಘೋಷಿಸಿದ್ದರು. 

1 ಲಕ್ಷಕ್ಕಿಂತ ಕಡಿಮೆ ಆದಾಯ: ಮಹಾ ರಾಷ್ಟ್ರದಲ್ಲಿ ಶೇ. 37.28 ರಷ್ಟು ಮರಾಠರು ಬಡತನ ರೇಖೆಗಿಂತ ಕೆಳಗಿದ್ದು, ಶೇ.93ಕ್ಕೂ ಹೆಚ್ಚು ಕುಟುಂಬಗಳ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಹೇಳಿದೆ. ಇನ್ನೊಂದೆಡೆ ಶೇ.76.86ರಷ್ಟು ಕುಟುಂಬಗಳು ಕೃಷಿ ಮತ್ತು ಕೃಷಿಕೂಲಿಯನ್ನೇ ಆದಾಯವನ್ನಾಗಿಸಿಕೊಂಡಿವೆ. ಸದ್ಯ ಸರಕಾರಿ ಹಾಗೂ ಅರೆ ಸರ್ಕಾರಿ ಸೇವೆಗಳಲ್ಲಿ ಶೇ. 6 ರಷ್ಟು ಮರಾಠರಿದ್ದು, ಡಿ ವರ್ಗದ ನೌಕರರೇ ಹೆಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next