Advertisement
ಪಾಲಿಕೆ ಸಭಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲಿ ಸದಸ್ಯ ಮೋಹನರೆಡ್ಡಿ ಮಾತನಾಡಿ, ಪಾಲಿಕೆಯಿಂದ ನೀಡಲಾದ ಸುಮಾರು ನಾಲ್ಕು ನೂರಕ್ಕೂ ಅಧಿಕ ನಿವೇಶನಗಳ ಮೂಲ ಮಾಲೀಕರ ಖಾತೆಯನ್ನು ಅಕ್ರಮವಾಗಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ಆಶ್ರಯ ಮನೆ, ನಿವೇಶನಗಳ ಹಕ್ಕುಪತ್ರ ಮತ್ತು ಸಾಲ ತೀರುವಳಿ ಪತ್ರ ಮೂಲ ಮಾಲೀಕರ ಹೆಸರಿನಲ್ಲಿದೆ. ಆದರೆ ಪಾಲಿಕೆ ಕೆಲ ಅಧಿಕಾರಿ, ಸಿಬ್ಬಂದಿಗಳು ಅಕ್ರಮವಾಗಿ ಬೇರೆಯವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಟ್ಟಿದ್ದಾರೆ. ಇದು ಭಾರೀ ದೊಡ್ಡ ಹಗರಣವಾಗಿದ್ದು, ಹಲವು ವರ್ಷಗಳಿಂದ ಗುಪ್ತವಾಗಿನಡೆದುಕೊಂಡು ಬರುತ್ತಿದೆ. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಆಕ್ರಮ ಖಾತೆಗಳಾಗಿ ಬಾರೀ ಅನಾಹುತ ನಡೆದಿದೆ. ಪಾಲಿಕೆಯಿಂದಲೇ ತನಿಖೆ ನಡೆಸಿ ಬಗೆಹರಿಸಲು
ಸಾಧ್ಯವಿಲ್ಲ. ಯಾರದೋ ಹೆಸರಲ್ಲಿ ಹಕ್ಕುಪತ್ರ ಇದ್ದರೆ, ಮತ್ಯಾರೋ ಖಾತೆ ಮಾಡಿಸಿಕೊಂಡಿದ್ದಾರೆ, ಆದ್ದರಿಂದ ಸಿಒಡಿ , ಎಸಿಬಿ ಅಥವಾ ಲೋಕಾಯುಕ್ತ ತನಿಖೆ ಅಗತ್ಯವಿದೆ ಎಂದರು. ಆಡಳಿತ ಪಕ್ಷದ ನಾಯಕ ನಾಗರಾಜ್ ಕಂಕಾರಿ ಮಾತನಾಡಿ, ಇದೊಂದು ದೊಡ್ಡ ಹಗರಣ, ಇದರ ತನಿಖೆಯಾಗಲೇ ಬೇಕು ಎಂದರೆ, ಸದಸ್ಯ ಪಾಲಾಕ್ಷಿ, ಈ ಹಗರಣದ ತನಿಖೆ ನಡೆಯುವವರೆಗೂ ಹೊಸ ಖಾತೆ ಮಾಡುವುದನ್ನು ನಿಲ್ಲಿಸಬೇಕು, ಅಕ್ರಮಗಳನ್ನು ತಡೆಯಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಇದು ನಿಜಕ್ಕೂ ಗಂಭೀರ ವಿಷಯವಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರನ್ನೊಳಗೊಂಡ ತನಿಖಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು. ಪಾಲಿಕೆಯ ಸದಸ್ಯರು ಪಕ್ಷಾತೀತವಾಗಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಮೇಯರ್ ಏಳುಮಲೈ ಪ್ರಕರಣವನ್ನು ಸಿಒಡಿಗೆ ವಹಿಸಲು ಆದೇಶಿಸಿದರು.
Related Articles
ಉಪ ಆಯುಕ್ತ ನಾಗರಾಜ್ ಅವರೇ ಇದಕ್ಕೆ ಕಾರಣ ಎಂದು ಆಡಳಿತ ಪಕ್ಷದ ನಾಯಕ ನಾಗರಾಜ್ ಕಂಕಾರಿ ಆರೋಪಿಸಿದರು.
Advertisement
ಪಾಲಿಕೆ ಸದಸ್ಯರಾದ ಮಾಲತೇಶ್, ಸುನೀತಾ ಅಣ್ಣಪ್ಪ ಇದೇ ರೀತಿ ಪ್ರಕರಣಗಳನ್ನು ಸಭೆಯ ಗಮನಕ್ಕೆ ತಂದರು. ಅಂತಿಮವಾಗಿ ನಾಗರಾಜ್ ಅವರಿಗೆ ಈ ಖಾತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಭೆಯ ಮುಂದಿಡಲು ಸೂಚಿಸಿ ಸಭೆಯಿಂದ ಹೊರ ಕಳುಹಿಸಲಾಯಿತು. ಪಾಲಿಕೆಯ ಸಭೆಯಲ್ಲಿ ಬೀದಿ ದೀಪದ ಸಮಸ್ಯೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಆರಂಭದಲ್ಲಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ವಿದ್ಯುತ್ ದೀಪಗಳು ಹಾಳಾದರೆ ಬದಲಿಸುವ ವ್ಯವಸ್ಥೆಯೇ ಪಾಲಿಕೆಯಲ್ಲಿಲ್ಲ. ಟೆಂಡರ್ ಪಡೆದವರು ಸರಿಯಾಗಿ ನಿರ್ವಹಣೆ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಂತಿಮವಾಗಿ ವಿದ್ಯುತ್ ದೀಪ ನಿರ್ವಹಣೆ ಮಾಡದ ಟೆಂಡರ್‌ದಾರರಿಗೆ ನೋಟಿಸ್ ನೀಡಲು, ಮುಂದೆ ಬ್ಲಾಕ್ ಲೀಸ್ಟ್‌ಗೆ ಸೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಂಗ್ರೆಸ್‌ನ ಯೋಗೀಶ್, ದುರ್ಗಿಗುಡಿ ಬಡಾವಣೆಯಲ್ಲಿ ಹೊಸದಾಗಿ ವಸತಿ ಗೃಹ ಆರಂಭಿಸಿದ್ದು, ಇದಕ್ಕೆ ಪಾಲಿಕೆಯಿಂದ ಲೈಸೆನ್ಸ್ ಪಡೆದಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಉಪಮೇಯರ್ ರೂಪಾ ಲಕ್ಷ್ಮಣ್, ಆಯುಕ್ತ ಮುಲೈ ಮುಹಿಲನ್ ಇದ್ದರು.