ಹೊಸದಿಲ್ಲಿ: ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಣಿತ ಪ್ರಾಧ್ಯಾಪಕರನ್ನು ನೇಮಿಸುವ ನಿಟ್ಟಿನಲ್ಲಿ ತಮ್ಮ ಕಾನೂನು ಮತ್ತು ನಿಯಮಗಳಲ್ಲಿ ಪೂರಕ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಸೂಚಿಸಿದೆ.
“ಉನ್ನತ ಶಿಕ್ಷಣ ಸಂಸ್ಥೆಗಳು ತಜ್ಞರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಯುಜಿಸಿ, “ಪ್ರೊಫೆಸರ್ ಆಫ್ ಪ್ರ್ಯಾಕ್ಟಿಸ್'(ಪಿಒಪಿ) ಎಂಬ ಹೊಸ ಹುದ್ದೆ ಯನ್ನು ಸೃಷ್ಟಿಸಿದೆ. ಈ ಸಂಬಂಧ ಈಗಾಗಲೇ ಮಾರ್ಗ ಸೂಚಿಯನ್ನು ಹೊರಡಿಸಲಾಗಿದೆ,’ ಎಂದು ವಿಶ್ವವಿದ್ಯಾನಿಲಯಗಳಿಗೆ ಬರೆದ ಪತ್ರದಲ್ಲಿ ಯುಜಿಸಿ ಕಾರ್ಯದರ್ಶಿ ಪಿ.ಕೆ.ಠಾಕೂರ್ ತಿಳಿಸಿದ್ದಾರೆ.
“ವಿಶ್ವವಿದ್ಯಾನಿಲಯಗಳ ಕುಲಪತಿಗಳು, ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಂಸ್ಥೆಗಳಲ್ಲಿ “ಪಿಒಪಿ’ಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ತಮ್ಮ ನಿಯಮಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರಲು ಕ್ರಮ ಕೈಗೊಳ್ಳಬೇಕು. ಜತೆಗೆ ಈ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತ ವರದಿಯನ್ನು ಸಲ್ಲಿಸಬೇಕು,’ ಎಂದು ಅವರು ಸೂಚಿದ್ದಾರೆ.