Advertisement

Ujire ಎಸ್‌ಡಿಎಂ ಪ್ರಾಧ್ಯಾಪಕರಿಗೆ ಪ್ರತಿಷ್ಠಿತ ಅಮೆರಿಕದ ಪೇಟೆಂಟ್‌

11:47 PM Mar 24, 2024 | Team Udayavani |

ಬೆಳ್ತಂಗಡಿ: ಉಜಿರೆ ಎಸ್‌.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ನೆಫಿಸತ್‌ ಪಿ., ಸಹಾಯಕ ಪ್ರಾಧ್ಯಾಪಕಿ ಡಾ| ಶಶಿಪ್ರಭಾ ಅವರ ಸಂಶೋಧನೆಗೆ ಪ್ರತಿಷ್ಠಿತ ಅಮೆರಿಕದ ಪೇಟೆಂಟ್‌ ಲಭಿಸಿದೆ. ಪ್ರಥಮ ಬಾರಿಗೆ ಎಸ್‌.ಡಿ.ಎಂ. ಕಾಲೇಜು ಅಮೆರಿಕದ ಪೇಟೆಂಟ್‌ ಮನ್ನಣೆ ಪಡೆದ ಹೆಗ್ಗಳಿಕೆಗೆ ಭಾಜನವಾಗಿದೆ.

Advertisement

ಈ ಹಿಂದೆ ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ನಾರಾಯಣ ಹೆಬ್ಟಾರ್‌ ಅವರ ಸಂಶೋಧನೆಗೆ ಆಸ್ಟ್ರೇಲಿಯದ ಪೇಟೆಂಟ್‌ ಲಭಿಸಿತ್ತು. ಉಳಿದೆಲ್ಲ ದೇಶಗಳ ಪೇಟೆಂಟ್‌ಗಿಂತ ಅಮೆರಿಕದ ಪೇಟೆಂಟ್‌ಗೆ ವಿಶೇಷ ವಿಶ್ವಮಾನ್ಯತೆ ಇದೆ. ಎಸ್‌.ಡಿ.ಎಂ. ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರದ ಸಂಶೋಧನ ಪ್ರಯೋಗಾಲಯದಲ್ಲಿಯೇ ಈ ಇಬ್ಬರು ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.

“ಬೆಂಝಿಲಿಡೀನ್‌ ಡಿರೈವೆಟೀಸ್‌ ಆಫ್‌ ಫಿನೊಬಾಮ್‌ ಆ್ಯಸ್‌ ಆ್ಯಂಟಿ-ಇನ್‌ಫÉಮೇಟರಿ ಏಜೆಂಟ್‌’ ಎಂಬ ವಿಷಯದ ಮೇಲೆ ಈ ಸಂಶೋಧನೆಯನ್ನು ಕೈಗೊಳ್ಳಲಾ ಗಿತ್ತು. ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಜನಗಳನ್ನು ವಿಸ್ತರಿಸುವುದಕ್ಕೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ಮಹತ್ವ ವಿದೆ. ವೈದ್ಯಕೀಯ ರಂಗದ ಚಿಕಿತ್ಸೆಯ ವಿಧಾನಗಳನ್ನು ಮರುರೂಪಿಸುವುದಕ್ಕೆ ಪ್ರಸಕ್ತ ಸಂಶೋಧನೆಯ ಫಲಿತಗಳು ಪ್ರಯೋಜನಕಾರಿಯಾಗಲಿವೆ.

ಸೌದಿ ಅರೇಬಿಯಾದ ಕಿಂಗ್‌ ಫೈಸಲ್‌ ವಿ.ವಿ. ಸಹಭಾಗಿತ್ವ ದೊಂದಿಗೆ ಕೈಗೊಳ್ಳಲಾಗಿದ್ದ ಸಂಶೋಧನೆಗೆ ಲಭಿಸಿದ ಪೇಟೆಂಟ್‌ನ ರಕ್ಷಣೆ 20 ವರ್ಷಗಳದ್ದಾಗಿದೆ. ಈ ನಿರ್ದಿಷ್ಟ ಸಂಶೋಧನ ಫಲಿತಗಳ ಆಧಾರದ ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯವು ಈ ಇಬ್ಬರು ಪ್ರಾಧ್ಯಾಪಕರದ್ದಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next