Advertisement

ಬಿಜೆಪಿ ವಾರ್ಡ್‌ ಉಸ್ತುವಾರಿಗಳ ನೇಮಕ

11:55 AM Aug 10, 2018 | Team Udayavani |

ನಗರ : ನಗರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಪುತ್ತೂರು ನಗರಸಭೆಯ 31 ವಾರ್ಡ್‌ಗಳಿಗೆ ನಗರ, ಗ್ರಾಮಾಂತರದಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವ್ಯಾಪ್ತಿಯಲ್ಲಿ ಪಕ್ಷದ 41 ಬೂತ್‌ ಸಮಿತಿಗಳೂ ಕಾರ್ಯನಿರ್ವಹಿಸುತ್ತಿವೆ. ಬೂತ್‌ ವ್ಯಾಪ್ತಿಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಆ. 10ರ ಸುಮಾರಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಪಕ್ಷದ ಪ್ರಮುಖರು ಸ್ಪರ್ಧಿಗಳ ಅಂತಿಮ ಪಟ್ಟಿ ತಯಾರಿಸಲಿದ್ದಾರೆ. ಆ. 11ಕ್ಕೆ ಜನಾಭಿಪ್ರಾಯದ ಮೂಲಕ ಸಂಗ್ರಹಿಸಿದ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದರು.

ಈಗಾಗಲೇ ಪಕ್ಷದಿಂದ ಎಲ್ಲ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದೆ. ಶಾಸಕ ಸಂಜೀವ ಮಠಂದೂರು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಒಂದು ಹಂತದ ವಾರ್ಡ್‌ ಭೇಟಿ ನಡೆಸಿದ್ದಾರೆ. ಪ್ರಮುಖ ನಾಯಕರಾದ ನಳಿನ್‌ ಕುಮಾರ್‌ ಕಟೀಲು, ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್‌ ಕಾರ್ಣಿಕ್‌, ಅನಂತ ಕುಮಾರ್‌ ಹೆಗಡೆ ವಾರ್ಡ್‌ ಭೇಟಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ವಾರ್ಡ್‌ ಉಸ್ತುವಾರಿಗಳು (ನಗರ -ಗ್ರಾಮಾಂತರ)
1. ಕಬಕ 1- ಶಿವರಾಮ ಸಪಲ್ಯ, ಪುರುಷೋತ್ತಮ ಮುಂಗ್ಲಿಮನೆ, 2. ಕಬಕ 2 – ರಾಘವೇಂದ್ರ ಪ್ರಭು, ಹರಿಪ್ರಸಾದ್‌ ಯಾದವ್‌, 3. ಪಟ್ನೂರು 1 – ಹರೀಶ್‌ ನಾಯ್ಕ, ಕೇಶವ ಬಜತ್ತೂರು, 4 ಬನ್ನೂರು 1 -ರಾಧಾಕೃಷ್ಣ ಗೌಡ ಬನ್ನೂರು, ಶಯನಾ ಜಯಾನಂದ, 5. ಬನ್ನೂರು 2 – ರತ್ಮಾಕರ ರೈ, ರಾಮಣ್ಣ ಗೌಡ ಗುಂಡೋಳೆ, 6. ಬನ್ನೂರು -3 – ವಿಶ್ವನಾಥ ಗೌಡ, ಉಷಾ ನಾರಾಯಣ, 7. ಚಿಕ್ಕಮುಟ್ನೂರು 1 – ಅಶೋಕ್‌ ಹಾರಾಡಿ, ಸುನೀಲ್‌ ದಡ್ಡು, 8. ಚಿಕ್ಕಮುಟ್ನೂರು 2 – ರಾಜೇಶ್‌ ಬನ್ನೂರು, ಸುಂದರ ಪೂಜಾರಿ ಬಡಾವು, ಪ್ರಕಾಶ್ಚಂದ್ರ ರೈ ಕೈಕಾರ, 9. ಚಿಕ್ಕಮುಟ್ನೂರು 3 -ಹರೀಶ್‌ ಕುಲಾಲ್‌, ತಿಲಕ್‌ ರೈ, 10. ಪುತ್ತೂರು ಕಸಬಾ 1 -ಚಂದ್ರಸಿಂಗ್‌, ರಾಧಾಕೃಷ್ಣ ಬೋರ್ಕರ್‌, 11. ಪುತ್ತೂರು ಕಸಬಾ 2 – ದಿನೇಶ್‌ ಜೈನ್‌, ಲೋಕೇಶ್‌ ಚಾಕೋಟೆ, 12. ಪುತ್ತೂರು ಕಸಬಾ 3 -ಸುಜೀಂದ್ರ ಪ್ರಭು, ಸುಧೀರ್‌ ಶೆಟ್ಟಿ, ಶಶಿಕುಮಾರ್‌ ರೈ ಬಾಲ್ಯೊಟ್ಟು, 13. ಪುತ್ತೂರು ಕಸಬಾ 4 – ಸಂತೋಷ್‌ ಬೊಳುವಾರು, ತೀರ್ಥಾನಂದ ದುಗ್ಗಳ, 14. ಪುತ್ತೂರು ಕಸಬಾ 5 – ರಾಮದಾಸ್‌ ಹಾರಾಡಿ, ರಾಜೀವ ಭಂಡಾರಿ, 15. ಪುತ್ತೂರು ಕಸಬಾ 6 -ವಿದ್ಯಾಗೌರಿ, ಯಶಸ್ವಿನಿ ಶಾಸ್ತ್ರಿ, 16. ಪುತ್ತೂರು ಕಸಬಾ 7 -ಯುವರಾಜ್‌ ಪೆರಿಯತ್ತೋಡಿ, ಜಯರಾಮ ಪೂಜಾರಿ, 17. ಪುತ್ತೂರು ಕಸಬಾ 8 -ಜಗದೀಶ್‌ ಶೆಣೈ, ಹರೀಶ್‌ ಬಿಜತ್ರೆ, 18. ಪುತ್ತೂರು ಕಸಬಾ 9- ಚಂದ್ರಶೇಖರ್‌ ರಾವ್‌ ಬಪ್ಪಳಿಗೆ, ಶಿವರಂಜನ್‌ ಎಂ., 19. ಪುತ್ತೂರು ಕಸಬಾ 10- ವಿನಯ ಭಂಡಾರಿ, ನಿತೀಶ್‌ ಕುಮಾರ್‌, 20. ಪುತ್ತೂರು ಕಸಬಾ 11 – ಜಯಶ್ರೀ ಎಸ್‌. ಶೆಟ್ಟಿ, ರಾಮಕೃಷ್ಣ ಮೂಡಂಬೈಲು, 21. ಪುತ್ತೂರು ಕಸಬಾ 12 – ದೀಕ್ಷಾ ಪೈ ಹಾಗೂ ಬೂಡಿಯಾರು ರಾಧಾಕೃಷ್ಣ ರೈ, 22. ಪುತ್ತೂರು ಕಸಬಾ 13 -ವಾಸುದೇವ ಪೈ, ವಸಂತ ಆರ್ಯಾಪು, 23. ಪುತ್ತೂರು ಕಸಬಾ 14 – ಉದಯಕುಮಾರ್‌ ಎಚ್‌., ಕೃಷ್ಣ ಶೆಟ್ಟಿ ಕಡಬ, 24. ಕೆಮ್ಮಿಂಜೆ 1 -ಬಾಲಚಂದ್ರ, ಸುರೇಶ್‌ ಭಟ್‌ ಇಡ್ಕಿದು, 25. ಕೆಮ್ಮಿಂಜೆ 2 -ಸೂರ್ಯಕುಮಾರ್‌ ಹಾಗೂ ಬಾಲಕೃಷ್ಣ ಬಾಣಜಾಲು, 26. ಕೆಮ್ಮಿಂಜೆ 3 -ದೇವಪ್ಪ ಬಿ.ಕೆ., ಅರುಣ್‌ ವಿಟ್ಲ, 27. ಕೆಮ್ಮಿಂಜೆ 4 – ರಮೇಶ್‌ ರೈ ಮೊಟ್ಟೆತ್ತಡ್ಕ, ಸಂತೋಷ್‌ ರೈ ಕೈಕಾರ, 28. ಕೆಮ್ಮಿಂಜೆ 5 -ನಾಗೇಂದ್ರ ಬಾಳಿಗ ಹಾಗೂ ರಾಕೇಶ್‌ ರೈ ಕೆಡೆಂಜಿ, 29. ಆರ್ಯಾಪು 1 -ರಾಕೇಶ್‌ ನಾಯ್ಕ, ವಿಜಯ ಬಿ.ಎಸ್‌., 30. ಆರ್ಯಾಪು 2 -ಚಂದ್ರ ಸಿ.ಎಚ್‌., ವಿಶ್ವೇಶ್ವರ ಭಟ್‌ ಬಂಗಾರಡ್ಕ, 31. ಬಲ್ನಾಡು 1 – ಅಶೋಕ್‌ ಉಜ್ರು ಪಾದೆ, ಪ್ರಕಾಶ್‌ ಕೆಲ್ಲಾಡಿ, ಸಾಜ ರಾಧಾಕೃಷ್ಣ ಆಳ್ವ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್‌ ಬಪ್ಪಳಿಗೆ, ಪ್ರಣಾಳಿಕೆ ಸಮಿತಿ ಸಂಚಾಲಕ ಗೋಪಾಲಕೃಷ್ಣ ಹೇರಳೆ, ನಗರಸಭಾ ಸದಸ್ಯ ರಾಜೇಶ್‌ ಬನ್ನೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next