Advertisement

ಪ್ರತ್ಯೇಕ ಪ್ರಾಧ್ಯಾಪಕರನ್ನು ನೇಮಿಸಿ

05:32 PM Apr 28, 2017 | |

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಲ್ಲಿ ನ್ಯಾಕ್‌ ಮಾನ್ಯತೆ ಪಡೆಯಲು ಇರುವ ಮಾರ್ಗಸೂಚಿಗಳ ನಿರ್ವಹಣೆಗೆ ಪ್ರತಿ ಕಾಲೆಜಿನಲ್ಲೂ ಪ್ರತ್ಯೇಕವಾಗಿ ಓರ್ವ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಕುಲಪತಿ ಪ್ರೊ|ಸಬಿಹಾ ಸೂಚಿಸಿದರು. 

Advertisement

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ| ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜರುಗಿದ ಪ್ರಾಂಶುಪಾಲರ ಸಭೆಯ ನಡಾವಳಿಗಳ ಕುರಿತು ಅವರು ಮಾತನಾಡಿದ ಅವರು, ಪ್ರಾಂಶುಪಾಲರ ಸಭೆಗೆ ಕಡ್ಡಾಯವಾಗಿ ಪ್ರಾಂಶುಪಾಲರೇ ಹಾಜರಾಗಬೇಕು ಎಂದು ಸೂಚಿಸಿದರು. 

137 ಮಹಿಳಾ ಕಾಲೇಜುಗಳಲ್ಲಿ ಕೇವಲ ಮೂರು ಮಹಿಳಾ ಮಹಾವಿದ್ಯಾಲಯಗಳು 2 ಎಫ್‌ ಮತ್ತು  12 ಬಿ ಮಾನ್ಯತೆ ಪಡೆದಿದ್ದು, ಭವಿಷ್ಯದಲ್ಲಿ ಪ್ರತಿ ಕಾಲೇಜುಗಳು ಈ ಮಾನ್ಯತೆ ಪಡೆಯುವ ಅರ್ಹತೆಯ ಸೌಲಭ್ಯ ಹೊಂದಬೇಕು. ಈ ವರೆಗೆ ಕೇವಲ 3 ಮಹಿಳಾ ಕಾಲೇಜುಗಳು 2-ಎಫ್‌ ಮತ್ತು 12-ಬಿ ಮಾನ್ಯತೆ ಪಡೆದಿವೆ.

15 ಮಹಿಳಾ ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆದಿವೆ ಎಂದು ವಿವರಿಸಿದರು. ಹೀಗಾಗಿ ಉಳಿದ ಎಲ್ಲ ಕಾಲೇಜುಗಳ ಕೂಡಾ ಕಡ್ಡಾಯವಾಗಿ 2-ಎಫ್‌, 12 ಬಿ ನ್ಯಾಕ್‌ ಮಾನ್ಯತೆ ಪಡೆಯುವ ಅರ್ಹತೆ ಹೊಂದಬೇಕು ಎಂದು ಸಲಹೆ ನೀಡಿ, ನ್ಯಾಕ್‌ ಮಾನ್ಯತೆ ಪಡೆಯಲು ಇರುವ ಮಾರ್ಗಸೂಚಿಗಳ ನಿರ್ವಹಣೆಗೆ ಪ್ರತಿ ಕಾಲೇಜಿನಲ್ಲೂ ಪ್ರತ್ಯೇಕವಾಗಿ ಓರ್ವ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಸೂಚಿಸಿದರು. 

ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ  ಡೀನ್‌ ಪ್ರೊ|ಎ ಸ್‌.ಬಿ.ಮಾಡಗಿ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳಿಗೆ ಸ್ಥಾನಿಕ ವಿಚಾರಣಾ ಸಮಿತಿ ನೀಡಿದ ಶೇಕಡಾ ಅಂಕಗಳನ್ನು ಇನ್ನೂ  ಹೆಚ್ಚಿಸಿಕೊಳ್ಳಬೇಕು. ನ್ಯಾಕ್‌ ಮಾನ್ಯತೆ ಪಡೆಯುವ ಅಗತ್ಯ, ವಿಧಾನ, ಅನುಕೂಲತೆ ಕುರಿತು ಮಾಹಿತಿ ನೀಡಿದರು.

Advertisement

ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳು  ನ್ಯಾಕ್‌ ಅಂಕ ಗಳಿಕೆಯಲ್ಲಿ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊ| ಪಿ.ಜಿ.ತಡಸದ ಮಾತನಾಡಿದರು.  ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಸೊನಾಲ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next