Advertisement

Chandrayaan-3: ‘ಶಿವಶಕ್ತಿ ಪಾಯಿಂಟ್‌’ಗೆ ಈಗ ಜಾಗತಿಕ ಮನ್ನಣೆ

01:06 AM Mar 25, 2024 | Team Udayavani |

ಹೊಸದಿಲ್ಲಿ: ಭಾರತದ ಚಂದ್ರ ಯಾನ-3 ಯೋಜನೆಯ ಲ್ಯಾಂಡರ್‌ ಚಂದ್ರನ ಮೇಲೆ ಇಳಿದಿದ್ದ ಜಾಗಕ್ಕೆ ಈಗ ಜಾಗತಿಕ ಮಾನ್ಯತೆ ದೊರಕಿದೆ. ವಿಕ್ರಂ ಲ್ಯಾಂಡರ್‌ ಇಳಿದಿದ್ದ ಜಾಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು “ಶಿವಶಕ್ತಿ ಪಾಯಿಂಟ್‌’ ಎಂದು ಹೆಸರಿಟ್ಟಿ ದ್ದರು. ಇದೀಗ ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) “ಸ್ಟೇಟಿಯೋ ಶಿವ ಶಕ್ತಿ’ ಎಂಬ ಹೆಸರಿಟ್ಟಿದೆ. ಇದರೊಂದಿಗೆ ಚಂದ್ರಯಾನ-3 ಮಿಷನ್‌ ಯಶಸ್ವಿಯಾದ 7 ತಿಂಗಳ ಬಳಿಕ ಈ ಹೆಸರನ್ನು ನೀಡಲಾಗಿದೆ.

Advertisement

ಏನಿದು ಐಎಯು?: ಐಎಯು ಬಾಹ್ಯಾಕಾಶದ ಸ್ಥಳಗಳಿಗೆ ಹೆಸರಿಡುವ ಕಾರ್ಯವನ್ನು ಮಾಡುತ್ತದೆ. ಕ್ಷುದ್ರಗ್ರಹ ಗಳು, ಇತರ ಗ್ರಹಗಳ ಉಪಗ್ರಹಗಳು ಸೇರಿದಂತೆ ಹಲವು ಆಕಾಶಕಾಯಗಳಿಗೆ ಈ ಸಂಸ್ಥೆ ಹೆಸರನ್ನು ನೀಡಿದೆ. ಇದರಿಂದಾಗಿ ಬಾಹ್ಯಾಕಾಶದ ಪ್ರಮುಖ ಸ್ಥಳಗಳು ಜಗತ್ತಿಗೆ ಪರಿಚಯವಾಗು ವುದಲ್ಲದೆ, ಅವುಗಳು ಮತ್ತಷ್ಟು ಪ್ರಸಿದ್ಧಿ ಪಡೆದುಕೊಳ್ಳಲಿವೆ. ಭಾರತದ ಸಾಧನೆ ಯನ್ನು ಶ್ಲಾ ಸಲು ಶಿವ ಶಕ್ತಿ ಪಾಯಿಂಟ್‌ಗೆ ಮಾನ್ಯತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next