Advertisement

ಯಕ್ಷಗಾನ ಫೆಲೋಶಿಪ್‌ಗೆ ಅರ್ಜಿ

07:05 AM Oct 12, 2017 | Team Udayavani |

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯು 2017-18ನೇ ಸಾಲಿನಲ್ಲಿ 5 ತಿಂಗಳ ಸಂಶೋಧನಾ ಅಧ್ಯಯನ ಮಾಡಿ ಪ್ರಬಂಧ ಮಂಡಿಸಲು ಫೆಲೋಶಿಪ್‌ ನೀಡಲು ಅರ್ಜಿ ಆಹ್ವಾನಿಸಿದೆ. ಸಂಶೋಧನಾ ಕಾರ್ಯಕ್ಕಾಗಿ ಒಬ್ಬ ಸಂಶೋಧನಾ ಅಭ್ಯರ್ಥಿಗೆ 90 ಸಾವಿರ ರೂ. ಹಾಗೂ ಮಾರ್ಗದರ್ಶಕರ ಗೌರವ ಸಂಭಾವನೆ 10 ಸಾವಿರ ರೂ. ನಿಗದಿಪಡಿಸಿದೆ. 

Advertisement

ಅರ್ಜಿ ಸಲ್ಲಿಸುವವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಪದವೀಧರರಾಗಿರಬೇಕು.ಆಸಕ್ತರು ಆಯ್ಕೆ ಮಾಡಿಕೊಳ್ಳುವ ಅಧ್ಯಯನ ವಿಷಯದ ಬಗ್ಗೆ ನಾಲ್ಕು ಪುಟಗಳ ಸಾರಲೇಖ (ಸಾರಾಂಶ) ಹಾಗೂ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಅ.31 ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ.

ಮಾಹಿತಿಗೆ ರಿಜಿಸ್ಟ್ರಾರ್‌, ಕರ್ನಾಟಕ ಯಕ್ಷಗಾನ ಅಕಾಡೆಮಿ, 2ನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 2 ಅವರಿಗೆ ಅರ್ಜಿಯನ್ನು ಕಳುಹಿಸಬಹುದಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next