Advertisement
ಈ ಕುರಿತು ಮಾತನಾಡಿದ ಅವರು ತೋಟಗಾರಿಕೆ ಇಲಾಖೆ ವತಿಯಿಂದ ನರೇಗಾದಡಿ 100 ದಿನಗಳ ಉದ್ಯೋಗ ನೀಡುವ ಜತೆಗೆ ಆರ್ಥಿಕ ಪರಿಸ್ಥಿತಿ ಸುಧಾರಣೆ, ಆಸ್ತಿ ಸೃಜಿಸುವ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಯಡಿ ಮಾವು, ಚಿಕ್ಕು, ತೆಂಗು, ಪೇರಲ, ವೀಳ್ಯದೆಲೆ ಲಿಂಬೆ, ಬಾಳೆ, ಸೀತಾಫಲ, ಅಂಜೂರ, ನೇರಳೆ, ನುಗ್ಗೆ ಮುಂತಾದ ಹಣ್ಣಿನ ತೋಟಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಕೃಷಿ ಹೊಂಡ ನಿರ್ಮಾಣ, ಈರುಳ್ಳಿ ಸಂಗ್ರಹಣಾ ಘಟಕ ಸ್ಥಾಪನೆ, ಶಾಲೆ (ಅಂಗನವಾಡಿ), ಆಸ್ಪತ್ರೆ ಆವರಣದಲ್ಲಿ ಕೈ ತೋಟ ನಿರ್ಮಾಣ, ಸಾರ್ವಜನಿಕ ಸ್ಥಳಗಳಲ್ಲಿ ಉದ್ಯಾನವನಗಳ ನಿರ್ಮಾಣ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಶಿರಹಟ್ಟಿ ಹಾಗೂ ಲಕ್ಷ್ಮೇàಶ್ವರ ತಾಲೂಕಿನ ಅರ್ಹ ರೈತರು ಅಗತ್ಯ ದಾಖಲೆಗಳೊಂದಿಗೆ ಮೇ 25ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಶಿರಹಟ್ಟಿ ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಲು ಕೋರಿದ್ದಾರೆ. Advertisement
ನರೇಗಾ ಕಾಮಗಾರಿಗೆ ಅರ್ಜಿ
12:21 PM May 23, 2020 | Suhan S |
Advertisement
Udayavani is now on Telegram. Click here to join our channel and stay updated with the latest news.