Advertisement
ವಿವೇಕ್ ತಿವಾರಿ ಅವರ ಮರಣೋತ್ತರ ವರದಿಯಿಂದ ಇನ್ನೊಂದು ಸಂಗತಿಯೂ ಸಾಬೀತಾಗಿದೆ. ಅದೆಂದರೆ ಆತ್ಮರಕ್ಷಣೆಗಾಗಿ ಪೊಲೀಸರು ಆತನಿಗೆ ಗುಂಡು ಹೊಡೆದರೆಂಬ ವಾದವು ಸುಳ್ಳೆಂದು ಗೊತ್ತಾಗಿದೆ.
Related Articles
Advertisement
ಪೊಲೀಸ್ ಎನ್‌ಕೌಂಟರ್‌ನಲ್ಲಿ ಯಾವುದೇ ತಪ್ಪಿಲ್ಲ; ಪೊಲೀಸರು ಕೇವಲ ಕ್ರಿಮಿನಲ್‌ಗಳ ಮೇಲೆ ಮಾತ್ರವೇ ಗುಂಡೆಸೆಯುತ್ತಾರೆ. ತಪ್ಪು ಯಾರೇ ಎಸಗಿದರೂ ಅವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದು ಸಚಿವ ಧರ್ಮಪಾಲ್ ಸಿಂಗ್ ಹೇಳಿರುವುದನ್ನು ಎಎನ್‌ಐ ವರದಿ ಮಾಡಿತ್ತು.
ಶುಕ್ರವಾರ ಆ್ಯಪಲ್ ಸೇಲ್ಸ್ ಮ್ಯಾನೇಜರ್ ತಿವಾರಿ ಅವರು ಮಹಿಳೆಯೊಂದಿಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಆಗ ಈ ಘಟನೆ ನಡೆದಿದೆ. ಘಟನೆಯ ಬಗ್ಗೆ ಆ ಮಹಿಳೆಯು “ಸತ್ಯ ಹೇಳುವಲ್ಲಿ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ; ತಪ್ಪೆಸಗಿದ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು’ ಎಂದು ಹೇಳಿರುವುದನ್ನು ಎಎನ್‌ಐ ವರದಿ ಮಾಡಿತ್ತು.
ಉತ್ತರ ಪ್ರದೇಶ ಪೊಲೀಸರು ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರೂಪಿಸಿದ್ದಾರೆ. ಪೊಲೀಸ್ ಸುಪರಿಂಟೆಂಡೆಂಟ್ ಓರ್ವರು ಈ ತಂಡದ ನೇತೃತ್ವ ವಹಿಸಿದ್ದರು.
ತಿವಾರಿಗೆ ಗುಂಡೆಸೆದ ಪೊಲೀಸ್ ಸಿಬಂದಿ, “ನನ್ನದೇನೂ ತಪ್ಪಿಲ್ಲ, ನಾನು ಆತ್ಮ ರಕ್ಷಣೆಗಾಗಿ ಗುಂಡೆಸೆದೆ, ಏಕೆಂದರೆ ಆತ ಮೂರು ತನ್ನ ಕಾರನ್ನು ನಮ್ಮ ಮೋಟಾರು ಸೈಕಲ್ ಮೇಲೆ ಹರಿಸಿ ನಮ್ಮನ್ನು ಸಾಯಿಸಲು ಯತ್ನಿಸಿದ’ ಎಂದು ಹೇಳಿದ್ದರು.