ಮುಂಬೈ: ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ಭಾರತದ ಮೊದಲ ಆಪಲ್ ಸ್ಟೋರ್ ಆರಂಭವಾಗಲಿದ್ದು, ಈ ನೂತನ ಮಳಿಗೆ ಹೇಗಿರಲಿದೆ ಎಂಬ ಚಿತ್ರವನ್ನು ಆಪಲ್ ಕಂಪನಿ ಬುಧವಾರ ಬಿಡುಗಡೆ ಮಾಡಿದೆ.
ʻಆಪಲ್ BKCʼ ಎಂಬ ಹೆಸರಿನಲ್ಲಿ ಸ್ಟೋರ್ ಆರಂಭವಾಗಲಿದ್ದು, ಈ ಸ್ಟೋರ್‌ನ ವಿನ್ಯಾಸ ಮುಂಬೈನ ಪ್ರಸಿದ್ಧ ʻಕಪ್ಪು-ಹಳದಿʼ ಟ್ಯಾಕ್ಸಿಯಿಂದ ಪ್ರೇರಣೆಗೊಂಡಿದೆ ಎಂದು ಹೇಳಲಾಗಿದೆ.
ಗ್ರಾಹಕರಿಗೆ ಅತ್ಯಾಧುನಿಕ ಗ್ರಾಹಕ ಅನುಭವ ನೀಡುವ ರೀತಿಯಲ್ಲಿ ಈ ಮಳಿಗೆಯ ವಿನ್ಯಾಸ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ ʻಹಲೋ ಮುಂಬೈʼ ಎಂದು ಬರೆಯಲಾಗಿದೆ.
ಎಪ್ರಿಲ್ ತಿಂಗಳಲ್ಲೇ ಮಳಿಗೆ ಉದ್ಘಾಟನೆಯಾಗಲಿದ್ದು, ಮುಂಬೈ ಬಳಿಕ ದೆಹಲಿಯಲ್ಲೂ ಆಪಲ್‌ನ ಎರಡನೇ ಮಳಿಗೆಯನ್ನು ತೆರೆಯಲು ಕಂಪೆನಿ ಉದ್ದೇಶಿಸಿದೆ ಎಂದು ಹೇಳಲಾಗಿದೆ.
ದೇಶದ ಮೊದಲ ಸ್ಟೋರ್ ಉದ್ಘಾಟನೆಯನ್ನು ಸಂಭ್ರಮಿಸಲು ಆಪಲ್ ಬಳಕೆದಾರರಿಗೆ ʻಆಪಲ್ BKCʼ ವಾಲ್‌ಪೇಪರ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಲಭ್ಯವಾಗಲಿದೆ. ಅಲ್ಲದೇ, ಆಪಲ್ ಮ್ಯೂಸಿಕ್‌ನಲ್ಲಿ ಹೊಸ ಪ್ಲೇಲಿಸ್ಟ್ ಕೂಡಾ ಲಭ್ಯವಿರಲಿದೆ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ.