Advertisement

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಲು ಮನವಿ

08:50 PM Apr 05, 2021 | Team Udayavani |

ಚಿಕ್ಕಮಗಳೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ ಸ್ವಾಮಿ ಸದಾ ಚಟುವಟಿಕೆಯಿಂದ ಕನ್ನಡ ಕೆಲಸದ ಜೊತೆಗೆ ಪತ್ರಿಕೋದ್ಯಮ, ರಾಜಕಾರಣ, ಸಹಕಾರ ಕ್ಷೇತ್ರ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದು ಪರಿಷತ್‌ ಮತದಾರರು ಶಿವಾನಂದಸ್ವಾಮಿ ಅವರನ್ನು ಬೆಂಬಲಿಸುವಂತೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ತಿಳಿಸಿದರು.

Advertisement

ನಗರದ ಹಿರೇಮಗಳೂರು ಅಳಸಿಂಗ ಪೆರುಮಾಳ್‌ ವೇದಿಕೆಯಿಂದ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಎಂ.ಸಿ.ಶಿವಾನಂದ ಸ್ವಾಮಿ ಅವರ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಕೈಪಿಡಿ ಕನ್ನಡಿಗರ ಕೈಸೇರಿ ಸೂಕ್ತ ತೀರ್ಮಾನವನ್ನು ಅವರೇ ಕೈಗೊಳ್ಳಲಿ ಎಂದ ಅವರು, ಶಿವಾನಂದಸ್ವಾಮಿ ಅವರು ಸದಾ ಚಟುವಟಿಕೆಯ ವ್ಯಕ್ತಿಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯನ್ನು ಕ್ರೀಡಾದೃಷ್ಟಿಯಿಂದ ತಗೆದುಕೊಳ್ಳಬೇಕು. ಜಿಲ್ಲೆಯ ಮತದಾರರನ್ನು ಭೇಟಿ ಮಾಡಿ, ಕನ್ನಡಸೇವೆ ಮತ್ತು ಮುಂದೆ ಮಾಡಬಹುದಾದ ಆಲೋಚನೆಗಳನ್ನು ಮತದಾರರಿಗೆ ತಿಳಿಸಿಕೊಡುವಂತೆ ಸಲಹೆ ನೀಡಿದರು.

ಐದು ವರ್ಷಗಳಿಂದ ಕನ್ನಡ ಸೇವೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌ ಅವರು ನಿಮ್ಮ ಅಧಿಕಾರ ಅವ ಧಿ ಮುಗಿದಿರಬಹುದು. ಆದರೆ, ನಿಮ್ಮ ಕನ್ನಡ ಸೇವೆಯ ಜವಾಬ್ದಾರಿಯಿಂದ ಹಿಂದೇ ಸರಿಯಬಾರದು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕುಂದೂರು ಅಶೋಕ್‌ ಮಾತನಾಡಿ, ಶಿವಾನಂದಸ್ವಾಮಿ ಅವರು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾ ಸಮಿತಿ ಕೋಶಾಧ್ಯಕ್ಷ ಮತ್ತು ಗೌರವ ಕಾರ್ಯದರ್ಶಿಯಾಗಿ ಸುವರ್ಣ ಕನ್ನಡ ಸಾಹಿತ್ಯ ಭವನ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಎರಡು ದಶಕಗಳ ಕಾಲ ಪರಿಷತ್‌ನಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ನಿಷ್ಠೆಯಿಂದ ದುಡಿದಿದ್ದಾರೆ.

ಸು ದೀರ್ಘ‌ ಸೇವೆ ನೀಡಿದವರನ್ನು ಮುಂದಿನ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ನ್ಯಾಯ ಸಮ್ಮತವಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕರು ಅವರನ್ನು ಬೆಂಬಲಿಸುತ್ತಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್‌ ಹಿರಿಯ ಸದಸ್ಯರಾದ ಬಿ.ತಿಪ್ಪೇರುದ್ರಪ್ಪ ಮಾತನಾಡಿ, ಕನ್ನಡದ ಕಣ್ಮಣಿ ಕಣ್ಣನ್‌ ಅವರು ಕಾಯಕ ನಿಷ್ಠರಿಗೆ ಜನ ಬೆಂಬಲ ಸದಾ ಇರುತ್ತದೆ ಎಂದಿದ್ದು ಕಾಯಕ ಜೀವಿ ಹಾಗೂ ನಿಷ್ಕಳಂಕ ಸಂಘಟನಾ ಚತುರ ಶಿವಾನಂದಸ್ವಾಮಿ ಅವರಿಗೆ ಜನ ಬೆಂಬಲ ಸಿಗಲಿದೆ ಎಂದರು. ಸಹಕಾರಿ ದುರೀಣರಾದ ಪದ್ಮಾತಿಮ್ಮೇಗೌಡ, ಪತ್ರಕರ್ತ ರಾಜು, ಅಳಸಿಂಗ ಪೆರುಮಾಳ್‌ ವೇದಿಕೆಯ ಅಧ್ಯಕ್ಷ ಎಂ.ಎನ್‌. ರಂಗನಾಥನ್‌ ಮಾತನಾಡಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಆಜೀವ ಸದಸ್ಯರಾದ ಕೆ.ಜಿ. ಶ್ರೀನಿವಾಸ್‌, ಹಿರೇಮಗಳೂರು ಪುಟ್ಟಸ್ವಾಮಿ, ಎ. ವಿರೂಪಾಕ್ಷಪ್ಪ, ಬಿ. ಅಮ್ಜದ್‌, ಕೆ.ಸುಭಾಷ್‌, ರಮೇಶ್‌, ಪರಿಸರ ವಿರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next