ಬೆಂಗಳೂರು: ಅನುದಾನರಹಿತ ಪ್ರಾಥಮಿಕ, ಪ್ರೌಢ ಶಿಕ್ಷಣ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ 2-3 ತಿಂಗಳಿನಿಂದ ವೇತನವಿಲ್ಲದ ಕಾರಣ ಸಂಕಷ್ಟದಲ್ಲಿದ್ದು, ಕೂಡಲೇ ಅವರಿಗೆ 25,000 ರೂ. ಪರಿಹಾರ ಹಾಗೂ ಅಗತ್ಯವಿರುವವರಿಗೆ ಆಹಾರ ಕಿಟ್ ನೀಡ ಬೇಕೆಂದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಗೃಹ ಕಚೇರಿ “ಕೃಷ್ಣಾ’ದಲ್ಲಿ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.
ಮನವಿ ಆಲಿಸಿದ ಯಡಿಯೂರಪ್ಪ ಅವರು, ಆರ್‌ಟಿಇ ಬಾಕಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕಾಲೇಜುಗಳಿಗೂ ವೇತನ ಮೊತ್ತ ಬಿಡು ಗ ಡೆಗೆ ಸೂಚಿಸಲಾ ಗುವುದು. ಬಡ ಶಿಕ್ಷಕರಿಗೆ ಆಹಾರ ಕಿಟ್ ನೀಡಲು ನಿರ್ದೇಶನ ಕೊಡಲಾಗುವುದು. ಉಳಿದ ಬೇಡಿಕೆಗಳ ಚರ್ಚಿ ಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಭೇಟಿ ಬಳಿಕ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ಬಳಿ ಪ್ರಮುಖವಾಗಿ ನಾಲ್ಕೈದು ವಿಚಾರ ಪ್ರಸ್ತಾಪಿಸಲಾಗಿದೆ.
ಪ್ರಾಥಮಿಕ, ಪ್ರೌಢ ಶಿಕ್ಷಣ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಸಿಬ್ಬಂದಿಗೆ 2-3 ತಿಂಗಳಿನಿಂದ ವೇತನ ಬಿಡುಗಡೆಯಾಗದ ಕಾರಣ ಕೂಡಲೇ ಅವರಿಗೆ 25,000 ರೂ. ಪರಿಹಾರದ ಜತೆಗೆ ಅಗತ್ಯವಿದ್ದವರಿಗೆ ಆಹಾರ ಕಿಟ್ ವಿತರಿಸುವಂತೆ ಕೋರಲಾಗಿದೆ ಎಂದು ಹೇಳಿದರು. ಕೋವಿಡ್ ಸಂಬಂಧ ಆರೋಗ್ಯ ಸಮೀಕ್ಷೆ ಸೇರಿದಂತೆ ಕೊರೊನಾ ಸೋಂಕಿಗೆ ಸಂಬಂಧಪಟ್ಟ ಕಾರ್ಯದಲ್ಲಿ ತೊಡಗಿಸಿ ಕೊಂ ಡಿರುವ ಎಲ್ಲ ಶಿಕ್ಷಕರು, ಉಪನ್ಯಾಸಕರಿಗೆ ಸುರಕ್ಷತಾ ಸಾಮಗ್ರಿ ನೀಡಬೇಕು. ಹಾಗೆಯೇ ವೈದ್ಯಕೀಯ ಕ್ಷೇತ್ರ, ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ನೀಡಿರುವ ವೈದ್ಯಕೀಯ ವಿಮೆಯನ್ನು ಇವರಿಗೂ ವಿಸ್ತರಿಸಬೇಕು.
ಇದೇ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅನುದಾನರಹಿತ ಶಾಲಾ- ಕಾಲೇಜು ಶಿಕ್ಷಕರು, ಉಪ ನ್ಯಾಸಕರಿಗೂ ರವಧನ ನೀಡಬೇಕು ಎಂದು ವಿ ಮಾಡಲಾ ಗಿದೆ ಎಂದು ಹೇಳಿದರು. ಸಂಕಷ್ಟದಲ್ಲಿರುವ ಶಾಲಾ- ಕಾಲೇಜುಗಳ ಮಂಡಳಿಗಳಿಗೆ ವೇತನಕ್ಕಾಗಿ ಬ್ಯಾಂಕ್‌ಗಳಲ್ಲಿ ಬಡ್ಡಿರಹಿತ ಸಾಲ ನೀಡಲು ನಿರ್ದೇಶನ ನೀಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಸಂಗ್ರಹಿಸಲು ಅವಕಾಶ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ವೈ.ಎ. ನಾರಾಯಣಸ್ವಾಮಿ, ಶರಣಪ್ಪ ಮಟ್ಟೂರ, ಎಸ್.ವಿ. ಸಂಕನೂರ, ಅ.ದೇವೇಗೌಡ, ಹನುಮಂತ ನಿರಾಣಿ, ಚೌಡರೆಡ್ಡಿ ತೂಪಲ್ಲಿ, ಅರುಣ್ ಶಹಾಪುರ, ಭೋಜೇ ಗೌಡ, ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಇತರರು ನಿಯೋಗ ದಲ್ಲಿದ್ದರು. ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಎಸ್.ಸುರೇಶ್ ಕುಮಾರ್ ಉಪಸ್ಥಿತರಿದ್ದರು.