Advertisement

ರಾಘವೇಶ್ವರ ಶ್ರೀಗಳ ವಿರುದ್ಧದ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ

03:45 AM Feb 17, 2017 | Harsha Rao |

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಧರ್ಮಚಕ್ರ ಟ್ರಸ್ಟ್‌ ವಿರುದ್ಧ ತನಿಖೆಗೆ ಆಗ್ರಹಿಸಿ ಪಿಐಎಲ್‌ ದಾಖಲಿಸಿದ್ದಕ್ಕೆ ದಂಡ ಮತ್ತು ನಿರ್ಬಂಧ ವಿಧಿಸಿದ್ದಲ್ಲದೆ, ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್‌ ಕ್ರಮ ಪ್ರಶ್ನಿಸಿ ಅಸ್ತ್ರ ಸಂಘಟನೆ ಮತ್ತು ಶ್ರೀಕ್ಷೇತ್ರ ಗೋಕರ್ಣ ಹಿತರಕ್ಷಣಾ ಸಮಿತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

Advertisement

ರಾಘವೇಶ್ವರಶ್ರೀ ಮತ್ತು ಮಠದ ಧರ್ಮಚಕ್ರ ಟ್ರಸ್ಟ್‌ ವಿರುದ್ಧ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿದ್ದ ಹೈ ಕೋರ್ಟ್‌, ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿತ್ತಲ್ಲದೆ, ಅವರ ಪರ ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸು ವುದಕ್ಕೆ ಶಾಶ್ವತ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಸ್ತ್ರ ಸಂಘಟನೆ ಮತ್ತು ಗೋಕರ್ಣ
ಹಿತರಕ್ಷಣಾ ಸಮಿತಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿದಾರರು ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 247 ದಿನ ವಿಳಂಬ ಮಾಡಿರುವುದು ಮತ್ತು ಮರು ಅರ್ಜಿ ಸಲ್ಲಿಸಲು 264 ದಿನ ವಿಳಂಬ ಮಾಡಿದ್ದು, ಈ ವಿಳಂಬಕ್ಕೆ ಯಾವುದೇ ಕಾರಣ ನೀಡಿಲ್ಲವೆಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯ
ಮೂರ್ತಿಗಳನ್ನೊಳಗೊಂಡ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.

ಏನಿದು ಪ್ರಕರಣ?: ಅಸ್ತ್ರ ಟ್ರಸ್ಟ್‌ ಆಡಳಿತ ಟ್ರಸ್ಟಿ ಎಂ.ಸಿ.ಚಂದನ, ಗೋಕರ್ಣ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣಪತಿ ಗಜಾನನ ರೇ ಎಂಬು ವರು 2013ರಲ್ಲಿ ಹೈಕೋರ್ಟ್‌ ನಲ್ಲಿ ಪಿಐಎಲ್‌ ಸಲ್ಲಿಸಿ, ರಾಘವೇಶ್ವರ ಶ್ರೀ ಮತ್ತು ಮಠದ ಧರ್ಮಚಕ್ರ ಟ್ರಸ್ಟ್‌ ವಿದೇಶಿ ದೇಣಿಗೆ ಕಾಯ್ದೆ ಉಲ್ಲಂ ಸಿದ್ದಾರೆಂದು ಆರೋಪಿಸಿದ್ದರು. ಈ ಕುರಿತು ಸಿಬಿಐ ತನಿಖೆ
ನಡೆಸಬೇಕೆಂದು ಕೋರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next