ಕಲಬುರಗಿ: ಕೇಂದ್ರ ಸರಕಾರದ ನೀತಿ ಆಯೋಗದ ಅಡಿಯಲ್ಲಿ ಈ ವರ್ಷದಿಂದ ಜಾರಿಯಾಗುವ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಗೆ ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಪ್ಪಾ ಪಬ್ಲಿಕ್ ಶಾಲೆ ಆಯ್ಕೆಯಾಗಿದೆ. ಕೇಂದ್ರ ಸರಕಾರದ ವಿಶನ್ ಭಾರತದಲ್ಲಿ ದಶಲಕ್ಷ ವಿದ್ಯಾರ್ಥಿಗಳಿಗೆ ನವೀನತೆಯ ಶಿಕ್ಷಣ ಅಂಗವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಬಹು ಮಹತ್ವಾಕಾಂಕ್ಷೆ ಯೋಜನೆಯಾಗಿದೆ.
ಕುತೂಹಲ, ಸೃಜನಶೀಲತೆ ಹಾಗೂ ಎಳೆ ಮನಸ್ಸಿನಲ್ಲಿ ಹೊಸ ಆಲೋಚನೆ ಬಿತ್ತುವಂತಹ ಉದ್ದೇಶವು ಅಟಲ್ ಟಿಂಕರಿಂಗ್ ಲ್ಯಾಬ್ ಹೊಂದಿದೆ. ಈ ಮಹತ್ವಾಕಾಂಕ್ಷೆ ಯೋಜನೆ ಜುಲೈ 2016ಕ್ಕೆ ಜಾರಿಯಾಗಿದ್ದು, ಕೇಂದ್ರ ಸರಕಾರದ ನೀತಿ ಆಯೋಗವು ಎಲ್ಲ ಶಾಲೆಗಳಿಗೆ ಈ ಲ್ಯಾಬ್‌ಗಾಗಿ ಆಹ್ವಾನಿಸಿತು.
ಭಾರತಾದ್ಯಾಂತ ಸರಿಸುಮಾರು 13000 ಸಾವಿರ ಶಾಲೆಗಳು ಈ ಲ್ಯಾಬ್‌ಗ ಅರ್ಜಿ ಸಲ್ಲಿಸಿದ್ದವು. ನೀತಿ ಆಯೋಗವು ಶಾಲೆಗಳ ಶೈಕ್ಷಣಿಕ ಹಿನ್ನೆಲೆ, ಮೂಲಸೌಕರ್ಯ, ವೈಜ್ಞಾನಿಕ ಚಟುವಟಿಕೆಗಳ ಆಧಾರ ಹಾಗೂ ಎರಡನೇ ಹಂತದಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ವಿಜ್ಞಾನ ಪ್ರದರ್ಶನ ಏರ್ಪಡಿಸಿ, ಅದರಲ್ಲಿ ಭಾಗಿಯಾಗಿ ಅದರಲ್ಲಿಯೂ ಕೂಡ ತೇರ್ಗಡೆಯಾದಂತಹ ಶಾಲೆಗಳಿಗೆ ಅನುಮತಿ ನೀಡಲಾಗಿದೆ.
ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕಳೆದೈದು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶತಪ್ರತಿಷತ ಫಲಿತಾಂಶ, ಶಾಲೆಯಲ್ಲಿರುವ ಸುಸಜ್ಜಿತ ಮೂಲಸೌಕರ್ಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿಜ್ಞಾನ ಮೇಳದಲ್ಲಿ ಗಮನಾರ್ಹ ಸಾಧನೆ ಹಾಗೂ ಹೆ„ದ್ರಾಬಾದನಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ವಿನೂತನ ಸೋಲಾರ್ ಸ್ಟೌವ್‌ನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದಕ್ಕೆ ಅಪ್ಪಾ ಪಬ್ಲಿಕ್ ಶಾಲೆಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಗೆ ಆಯ್ಕೆ ಮಾಡಲಾಯಿತು.
ಸ್ಥಾಪನಾ ವೆಚ್ಚಕ್ಕೆ ಶಾಲೆಗೆ 10 ಲಕ್ಷ ರೂ. ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಡಿದ ದೀಪಾ ಕುಲಕರ್ಣಿ, ಹೇಮಲತಾ ಶೆಟ್ಟಿ, ಸಂಗಮೇಶ ಬೋರೊಟಿ ಹಾಗೂ ಶಿವಪ್ರಕಾಶ ವಾಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಾ| ಅಪ್ಪ ಹರ್ಷ: ಅಪ್ಪ ಪಬ್ಲಿಕ್ ಶಾಲೆಗೆ ಸಂದ ಈ ಗೌರವಕ್ಕೆ ಸಂಸ್ಥೆಯ ಅಧ್ಯಕ್ಷ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕಲಿಕೆ ಮತ್ತು ಪ್ರಯೋಗ ಮಾಡಲು ಸದಾವಕಾಶವಾಗಿದೆ ಎಂದಿದ್ದಾರೆ.