Advertisement

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗೆ ಆ್ಯಪ್‌ ಸಿದ್ಧ

01:48 AM Jan 12, 2021 | Team Udayavani |

ಉಡುಪಿ: ಗ್ರಾಮ ಪಂಚಾಯತ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಲು ರಾಜ್ಯ ಚುನಾವಣ ಆಯೋಗ ಸಿದ್ಧವಾಗಿದ್ದು ತಂತ್ರಜ್ಞಾನಾಧಾರಿತವಾಗಿ ಮೀಸಲಾತಿ ನಿಗದಿಪಡಿಸಲು ಸೂಚಿಸಿದೆ.

Advertisement

ಕೊಪ್ಪಳ ಜಿಲ್ಲೆಯ ನ್ಯಾಶನಲ್‌ ಇನ್ಫಾರ್ಮೆಟಿಕ್ಸ್‌ ಸೆಂಟರ್‌ ಈ ಆ್ಯಪ್‌ GPPVP application)  ಅಭಿವೃದ್ಧಿಪಡಿಸಿದೆ. ಇದೇ ಆ್ಯಪ್‌ನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಅಳವಡಿಸುವಂತೆ ಆಯೋಗ ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಿದೆ.

ಜ. 20ರ ಒಳಗೆ ಎಲ್ಲ ಕಡೆ ಮೀಸಲಾತಿಯನ್ನು ನಿಗದಿಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಪ್ರಾಯಃ ಜ. 18ರ ಬಳಿಕ ಈ ಪ್ರಕ್ರಿಯೆಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಎಲ್ಲ ಗ್ರಾ.ಪಂ. ಸದಸ್ಯರ ಸಮ್ಮುಖದಲ್ಲಿ ನೆರವೇರಿಸಲಾಗುತ್ತದೆ.

ಜಿಲ್ಲಾಡಳಿತಕ್ಕೆ ಆಯಾ ಜಿಲ್ಲೆಯ ಎನ್‌ಐಸಿ ಅಧಿಕಾರಿಗಳು ಮತ್ತು ಅವರ ತಂಡ ತಾಂತ್ರಿಕ ಸಹಾಯವನ್ನು ನೀಡಲಿದೆ. 1993ರಿಂದ ಮೀಸಲಾತಿ ನಿಗದಿಯಾದಂತೆ ಆ್ಯಪ್‌ ಮೀಸಲಾತಿಯನ್ನು ಸೂಚಿಸುತ್ತದೆ. ಎಲ್ಲಿ ತಾಂತ್ರಿಕವಾಗಿ ತೋರಿಸುವುದಿಲ್ಲವೋ ಅಲ್ಲಿ ಲಾಟರಿ ಮೂಲಕ ನಡೆಸಲಾಗುತ್ತದೆ. ಇದು ತಾಂತ್ರಿಕವಾಗಿ ನಡೆಯುವ ಕಾರಣ ಇದರ ಕುರಿತು ಯಾರೂ ಆಕ್ಷೇಪ ಹೇಳು ವಂತಿಲ್ಲ, ಮೇಲಾಗಿ ಕಂಪ್ಯೂಟರ್‌ ಪರದೆಯಲ್ಲಿ ಎಲ್ಲ ಸದಸ್ಯರಿಗೆ ತೋರಿಸಿಯೇ ಮಾಡಲಾಗುತ್ತದೆ. ಮೀಸಲಾತಿ ನಿಗದಿ ಬಳಿಕ ಇದನ್ನು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಇದೇ ವೇಳೆ ವಿಜೇತರಾದ ಸದಸ್ಯರ ಹೆಸರೂ ರಾಜ್ಯಪತ್ರದಲ್ಲಿ ಪ್ರಕಟವಾಗುತ್ತದೆ. ಏತನ್ಮಧ್ಯೆ ಸದಸ್ಯರಿಗೆ ರಾಜ್ಯಾದ್ಯಂತ ತರಬೇತಿಯನ್ನೂ ಏರ್ಪಡಿಸಲಾಗುತ್ತಿದೆ.

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನ ಮೀಸಲಾತಿ ನಿಗದಿ ಪಡಿಸಲು ರಾಜ್ಯ ಚುನಾವಣ ಆಯೋಗದಿಂದ ಸೂಚನೆ ಬಂದಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಆ್ಯಪ್‌ ಮೂಲಕ ಮೀಸಲಾತಿ ನಿಗದಿಪಡಿಸುತ್ತೇವೆ. ಮ್ಯಾನುವಲಿ ಮಾಡುವುದಕ್ಕಿಂತ ಇದು ಹೆಚ್ಚು ಸೂಕ್ತ, ಸುಲಭವಾಗಿದೆ.           – ಜಿ. ಜಗದೀಶ್‌,  ಜಿಲ್ಲಾಧಿಕಾರಿಗಳು, ಉಡುಪಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next