Advertisement

ಶಾಸಕರ ಸೂಚನೆಗೂ ಬೆಲೆ ನೀಡದ ಅಧಿಕಾರಿಗಳು!

01:04 PM Feb 09, 2021 | Team Udayavani |

ದೊಡ್ಡಬಳ್ಳಾಪುರ: ರಾಗಿ ಖರೀದಿ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಭಾನುವಾರವೂ ರೈತರಿಂದ ರಾಗಿ ಖರೀದಿ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಭಾನುವಾರ ಅಧಿಕಾರಿಗಳ ಸುಳಿವು ಇಲ್ಲದಾಗಿತ್ತು. ಖರೀದಿ ತಡವಾಗಿ ಆರಂಭಿಸಿದ್ದೇ ಇಷ್ಟೆಲ್ಲಾ ಅವ್ಯವಸ್ಥೆ ಉಂಟಾಗಲು ಕಾರಣವಾಗಿದೆ.

Advertisement

ನಗರದ ಎಪಿಎಂಸಿ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತಾಲೂಕು ಆಡಳಿತದ ಸಹಯೋಗದಲ್ಲಿ ಆರಂಭಿಸಿರುವ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಪ್ರಕ್ರಿಯೆಆರಂಭವಾಗಿದ್ದರೂ, ರೈತರು ರಾಗಿ ಸರಬರಾಜು ಮಾಡಲು ಮೈನಡುಗಿಸುವ ಚಳಿಯÇÉೇ ಖರೀದಿ ಕೇಂದ್ರದ ಮುಂದೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಗಿ ತರುವಂತೆ ಪತ್ರ: ರಾಗಿ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದ ರೈತರಿಗೆ ನಿಗದಿತ ದಿನಾಂಕದಂದೇ ಬರುವಂತೆ ಪತ್ರ ನೀಡಲಾಗಿದ್ದು, ಫೆ.1ರಿಂದಲೇ ಖರೀದಿ ಕೇಂದ್ರಕ್ಕೆ ರಾಗಿ ತರುವಂತೆ ಪತ್ರ ನೀಡಲಾಗಿದೆ. ಆದರೆ, ಫೆ.6ರಿಂದ ಖರೀದಿ ಆರಂಭಿಸಿದ್ದು, ಫೆ.1ರಂದು ರಾಗಿ ತರುವಂತೆ ತಿಳಿಸಲಾಗಿದ್ದ ರೈತರು ಸೇರಿದಂತೆ ಫೆ.8ರವರೆಗಿನ ರೈತರು ಟ್ರ್ಯಾಕ್ಟರ್‌ಗಳಲ್ಲಿ ಖರೀದಿ ಕೇಂದ್ರಕ್ಕೆ ರಾಗಿ ತಂದು ತಮ್ಮ ಸರತಿಗಾಗಿ ರಾತ್ರಿ ಇಡೀ ಕಾದು ಕುಳಿತಿದ್ದಾರೆ.

ಮೊದಲಿನವರಿಗೆ ಆದ್ಯತೆ ನೀಡಿ: ಕನಿಷ್ಠ ಒಂದೆರಡು ವಾರಗಳ ಕಾಲವಾದರು ಎರಡು ಪಾಳಿಯಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುವಂತೆ ಮಾಡಿದರೆ ರೈತರು ಇಡೀ ರಾತ್ರಿ ಮೈನಡುಗಿಸುವ ಚಳಿಯಲ್ಲಿ ವನವಾಸ ಮಾಡುವುದು ತಪ್ಪಿಸಬಹು ದಾಗಿತ್ತು. ಮೊದಲು ದಿನಾಂಕ ನೀಡಿರುವ ರೈತರಿಗೆ ಆದ್ಯತೆ ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next