Advertisement

ಸೌಲಭ್ಯ ವಂಚಿತ ಆಲಮೇಲ ಎಪಿಎಂಸಿ

05:56 PM Aug 31, 2021 | Shreeram Nayak |

ಆಲಮೇಲ: ರೈತರ ವ್ಯಾಪಾರಿ ಕೇಂದ್ರವಾದ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಅಭಿವೃದ್ದಿಗೆ ಹಣ ಮಂಜೂರಾಗಿದ್ದರು ಕೆಲಸ ಮಾಡದೆ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಅಡತ್‌ ವ್ಯಾಪಾರಸ್ಥರಿಂದ ಕೇಳಿ ಬರುತ್ತಿದೆ.

Advertisement

ಆಲಮೇಲ ಪಟ್ಟಣ ಈ ಭಾದಲ್ಲಿಯೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ರೈತರ ಅನುಕೂಲಕ್ಕಾಗಿ ಸರ್ಕಾರ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭಿಸಿ 10 ವರ್ಷ ಕಳೆದರು ಯಾವುದೆ ಮೂಲ ಸೌಲಭ್ಯಗಳು ಒದಗಿಸಿಲ್ಲ.

2009ರಲ್ಲಿ ಎಪಿಎಂಸಿ ಮಂಜೂರಾಗಿದ್ದು 2013ರಲ್ಲಿ ಪ್ಲಾಟ್‌ಗಳು ಹಂಚಿಕೆಯಾಗಿವೆ. 2015ರಲ್ಲಿ ಮೂಲ ವ್ಯಾಪರಸ್ಥರು ಕಟ್ಟಡ ನಿರ್ಮಿಸಿಕೊಂಡು ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಆದರೆ ಈ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಮಳೆಗಾಲದಲ್ಲಿ ತಿರುಗಾಡಲು ಬರದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಅಡತ ವ್ಯಾಪರಸ್ಥರು. ಜಾನುವಾರುಗಳ ಸಂತೆ: ಎಪಿಎಂಸಿ ವರ್ತಕರು ಮೂಲ ಸೌಲಭ್ಯಗಳಿಂದ
ವಂಚಿತಗೊಂಡಿದ್ದರೆ ಅದೆ ಆವರಣದಲ್ಲೆ ಪ್ರತಿ ಶುಕ್ರವಾರ ವಾರಕ್ಕೊಮ್ಮೆ ಜಾನುವಾರ ಸಂತೆ ನಡೆಯುತ್ತದೆ. ಇದರಿಂದ ಎಪಿಎಂಸಿ ವರ್ತಕರಿಗೆ ಮತ್ತಷ್ಟು ತೊಂದರೆಯಾಗಿದೆ. ದನ, ಕುರಿಗಳ ವ್ಯಾಪರಕ್ಕಾಗಿಯೆ ಬೇರೆಡೆ ಜಾಗವಿದ್ದರು ಅದನ್ನು ಬಳಕೆ ಮಾಡದಿರುವುದರಿಂದ ಮುಳ್ಳು
ಕಂಟಿ ಬೆಳೆದು ಸಾರ್ವಜನಿಕರಿಗೆ ಬಹಿರ್ದೆಸೆ ಜಾಗವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ:ಸಿಎಂ ಭೇಟಿಯಾದ ಸುದೀಪ್ : ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚೆ

ಕಾಮಗಾರಿ ಸ್ಥಗಿತ: ಎಪಿಎಂಸಿ ಮೂಲಭೂತ ಸೌಲಭ್ಯಗಳಿಗಾಗಿ ಕಳೆದ ಎರಡು ವರ್ಷಗಳ ಹಿಂದೆ 2 ಕೋಟಿ ಮಂಜೂರಾಗಿದ್ದು ವರ್ಷದ ಬಳಿಕ ವರ್ತಕರ ಒತ್ತಾಯದ ಮೇರೆಗೆ 2021 ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಿ ರಸ್ತೆಗಳು ಅಗೆದು ಅರ್ಧ ಕಾಮಗಾರಿ ಮಾಡಿ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ

Advertisement

6 ವರ್ಷದಿಂದ ಎಪಿಎಂಸಿ ಆವರಣದಲ್ಲಿ ಕಟ್ಟಡ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ.ಇಲ್ಲಿವರೆಗೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.
2 ಕೋಟಿರೂ.ಮಂಜೂರಾಗಿ ವರ್ಷ ಕಳೆದರು ಕಾಮಗಾರಿ ಆರಂಭಿಸಿಲ್ಲ. ಅಡತ ವ್ಯಾಪರಸ್ಥರ ಒತ್ತಾಯದ ಮೇರೆಗೆ ಕಾಮಗಾರಿ ಆರಂಭಿಸಿ ರಸ್ತೆಗಳನ್ನು ಅಗೆದು ಅರ್ಧಕ್ಕೆ ನಿಲ್ಲಿಸಿ ಮೂರು ತಿಂಗಳಾಗಿದೆ.ಈ ಬಗ್ಗೆ ಯಾರೂ ಕ್ರಮಕೈಗೊಳ್ಳುತ್ತಿಲ್ಲ.
-ಆನಂದಬಾಗೇವಾಡಿ
ಎಪಿಎಂಸಿ ಅಡತ ವ್ಯಾಪಾರಸ್ಥ

ಇಲ್ಲಿನ ಎಲ್ಲ ವರ್ತಕರು ಸರಿಯಾಗಿ ತೆರಿಗೆ ತುಂಬುತ್ತೇವೆ. ಆದರೆ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. ಎಪಿಎಂಸಿ ಆವರಣದಲ್ಲಿ ನಡೆಯುವ ಜಾನುವಾರ ಸಂತೆ ಬಂದ್‌ ಮಾಡಿಸಿ ಅದರದೆ ಜಾಗದಲ್ಲಿ ವ್ಯಾಪರಕ್ಕೆ ವ್ಯವಸ್ಥೆ ಮಾಡಬೇಕು.
-ಚಿದಾನಂದ ಆಳೂರ
ಎಪಿಎಂಸಿ ಅಡತ ವ್ಯಾಪಾರಸ್ಥ

ಎಪಿಎಂಸಿ ಮೂಲ ಸೌಲಭ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖೀತ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಮೂಲಭೂತ ಸೌಲಭ್ಯಗಳಿಗೆ ಹಣ ಮಂಜೂರಾಗಿದ್ದು ಅಭಿವೃದ್ಧಿ ಮಾಡುತ್ತೇವೆ ಎಂದು ವರ್ಷಗಟ್ಟಲೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.
-ಮಡಿವಾಳಪ್ಪ ಅಲಗುಡಿ
ಎಪಿಎಂಸಿ ಅಡತ ವ್ಯಾಪಾರಸ್ಥ

ಎಪಿಎಂಸಿ ಆವರಣದಲ್ಲಿ ಎಲ್ಲೆಂದರಲ್ಲಿ ವಿದ್ಯುತ್‌ ಕಂಬಗಳಿವೆ. ಅದನ್ನ ತೆರವುಗೊಳಿಸುವ ಸಲುವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುತ್‌ಕಂಬಗಳು ತೆರವುಗೊಂಡ ಬಳಿಕಕಾಮಗಾರಿ ಆರಂಭಿಸಲಾಗುತ್ತೆ. ಈ ಸಮಸ್ಯೆ ಬಗ್ಗೆ ಸಂಬಂಧಿಸಿದ ಜಿಲ್ಲಾ ಅಧ್ಯಕ್ಷರೊಂದಿಗೆ ರಾಜ್ಯ ಅಧಿಕಾರಿಗಳ
ಗಮನಕ್ಕೆ ತರಲಾಗಿದೆ.
-ಐ.ಎಸ್‌.ಔರಂಗಬಾದ
ಎಪಿಎಂಸಿ ಕಾರ್ಯದರ್ಶಿ, ಸಿಂದಗಿ\

-ಅವಧೂತ ಬಂಡಗಾರ

Advertisement

Udayavani is now on Telegram. Click here to join our channel and stay updated with the latest news.

Next