ಹುಮನಾಬಾದ: ಪಟ್ಟಣದ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಅಧ್ಯಕ್ಷ ಡಾ| ಭದ್ರೇಶ ಪಾಟೀಲ ನೇತೃತ್ವದಲ್ಲಿ ಗುರುವಾರ ಆಡಳಿತ ಮಂಡಳಿ ಸಭೆ ಜರುಗಿತು.
ಸಮಿತಿ ಕಾರ್ಯದರ್ಶಿ ತುಳಸೀರಾಮ ಲಾಖೆ ಮಾತನಾಡಿ, ಸಮಿಯಗೆ ಬರುವ ಆದಾಯಕ್ಕೂ ಹೆಚ್ಚು ಖಚು ಮಾಡಲಾಗಿದೆ ಡಿಸೆಂಬರ್ ತಿಂಗಳಲ್ಲಿ 1,40,501 ಆದಾಯ ಬಂದಿದ್ದು, ಈ ಪೈಕಿ 1,93,702 ರೂ. ಖರ್ಚು ಮಾಡಲಾಗಿದೆ ವಿವರಿಸಿದರು.
ಈ ಮಧ್ಯೆ ಮಾತನಾಡಿದ ವೀರೇಶ್ ಭಾವಿ ಪ್ರಾಂಗಣದಲ್ಲಿ ಅಳವಡಿಸಿದ ವಿದ್ಯುತ್ ದೀಪಗಳ ಬಿಲ್ ಈವರೆಗೂ ಪಾವತಿ ಮಾಡಿಲ್ಲ. ಕೂಡಲೇ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿದರು.
ಸದಸ್ಯ ರಹೀಮ್ ಖಾನ್ ಮಾತನಾಡಿ, ಕಾನೂನು ಮೀರಿ ಯಾವುದೇ ಕೆಲಸ ಕಚೇರಿಯಲ್ಲಿ ನಡೆಯಬಾರದು. ವಿವಿಧ ಆರೋಪಗಳ ಕುರಿತು ಮಾಹಿತಿ ಪಡೆದರು. ಈ ಮಧ್ಯೆ ವಿವಿಧ ಆರೋಪಗಳ ಕುರಿತು ಕಾರ್ಯದರ್ಶಿ ಸ್ಪಷ್ಟಿಕರಣ ನೀಡುವ ಕಸರತ್ತು ನಡೆಸಿದರು.
ನಂತರ ಮಾತನಾಡಿದ ಅಧ್ಯಕ್ಷ ಡಾ| ಭದ್ರೇಶ ಪಾಟೀಲ, ಲೈಸೆನ್ಸ್ ನವೀಕರಣ, ನಿವೇಶನ ವರ್ಗಾವಣೆ, ಹೊಸ ನಿವೇಶನ ಸೇರಿದಂತೆ ಇತರೆ ಪ್ರಮುಖ ವಿಷಯಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಸೂಕ್ಷ್ಮವಾಗಿ ತಿಳಿದುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ವರ್ಷ ಎಪಿಎಂಸಿಗೆ ಸೋಯಾ ಬಂದಿಲ್ಲ. ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ ನಿಗ ವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಸಭೆಯಲ್ಲಿ ಇಪಾಧ್ಯಕ್ಷ ಕಾಮಶೆಟ್ಟಿ ಪಾಟೀಲ, ಬಸವರಾಜ ಪಾಟೀಲ, ನರಸಿಂಗರಾವ(ರಾಜು) ಭಂಡಾರಿ ಸೇರಿದಂತೆ ಇತರೆ ಸದಸ್ಯರು ಇದ್ದರು.