Advertisement
2 ವರ್ಷಗಳ ಹಿಂದೆ ವಾಮಂಜೂರಿನ ಮಂಗಳ ಜ್ಯೋತಿ ವಿಶೇಷ ಶಾಲೆಯಲ್ಲಿ 10ನೇ ತರಗತಿಯನ್ನು ಶೇ. 63 ಅಂಕಗಳೊಂದಿಗೆ ಪೂರೈಸಿದ್ದ ಅನುಶ್ ನಂತೂರಿನ ನಿಟ್ಟೆ ಶಂಕರ ಅಡ್ಯಂತಾಯ ಕಾಲೇಜಿಗೆ ಪಿಯುಸಿ ಶಿಕ್ಷಣಕ್ಕೆ ಬಂದಿದ್ದರು. ಆಡಳಿತ ಮಂಡಳಿ ಮೊದಲಿಗೆ ದಾಖಲಿಸಿಕೊಳ್ಳಲು ಹಿಂಜರಿದರೂ ಆತನ ಮುಖದಲ್ಲಿನ ಅದಮ್ಯ ಉತ್ಸಾಹ ಕಂಡು ಪ್ರವೇಶ ನೀಡಿತ್ತು. ವಾಣಿಜ್ಯ ವಿಭಾಗ ಆರಿಸಿಕೊಂಡ ಅನುಶ್ ಆಸಕ್ತಿಯಿಂದ ಅಧ್ಯಯನ ಮಾಡಿದರು. ದ್ವಿತೀಯ ಪಿಯುಸಿಯಲ್ಲಿ ಶೇ. 73 ಅಂಕ ಗಳಿಸಿದ್ದಲ್ಲದೇ ವಾಣಿಜ್ಯ ವಿಷಯಗಳಲ್ಲಿ ಶೇ. 80 ಅಂಕ ಪಡೆದು ಸೈ ಎನಿಸಿಕೊಂಡಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿರುವ ಅನುಶ್ ದೃಶ್ಯಕಲೆ, ಕ್ಲೇ ಪೈಂಟಿಂಗ್, ವಾಲಿಬಾಲ್ ಹಾಗೂ ಓಟದಲ್ಲೂ ಮುಂದು. ವಾಲಿಬಾಲ್ ಮತ್ತು ಜಾವೆಲಿನ್ ತ್ರೋದಲ್ಲಿ ವಿಶೇಷ ಮಕ್ಕಳ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಅನುಶ್‌ನಲ್ಲಿದ್ದ ಲವಲವಿಕೆ, ಕಲಿಕೆಯ ತುಡಿತ ನಮ್ಮ ದುಡಿಮೆಯನ್ನು ಸಾರ್ಥಕಗೊಳಿಸಿದೆ. ಅಧ್ಯಾಪಕರ ಮುಖಚರ್ಯೆ, ನಾಲಗೆಯ ಚಲನೆ, ಹಾವಭಾವ, ಕೈ ಭಾಷೆಗಳಿಂದಲೇ ವಿಷಯವನ್ನು ಸಂಪೂರ್ಣ ಗ್ರಹಿಸುವ ಶಕ್ತಿ, ಜಾಣ್ಮೆ ಆತನಲ್ಲಿದೆ. ವಿಶೇಷವಾದ ಗ್ರಹಣ ಶಕ್ತಿ ಆತನದು ಎನ್ನುತ್ತಾರೆ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶಕುಂತಳಾ ಶೆಟ್ಟಿ. ಸಂಕಷ್ಟದಲ್ಲಿ ಕುಟುಂಬ ಆತನ ಅಣ್ಣನೂ ಅಂಗವೈಕಲ್ಯ ಹೊಂದಿದ್ದಾರೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡ ತಂದೆ ರಾಮಕೃಷ್ಣ ನಾೖಕ್ ಜೀವನದಲ್ಲಿ ಜುಗುಪ್ಸೆಗೊಂಡು ಇತ್ತೀಚೆಗೆ ಆತ್ಮಹತ್ಯೆಗೆ ಶರಣರಾಗಿದ್ದಾರೆ. ತಾಯಿ ಯಶವಂತಿ ಗೃಹಿಣಿ. ಆದಾಯದ ಮೂಲವೇ ಇಲ್ಲದ ಕುಟುಂಬ ತೀರಾ ಸಂಕಷ್ಟದಲ್ಲಿದ್ದು, ಅನುಶ್‌ನ ಮುಂದಿನ ಶಿಕ್ಷಣ ಆತಂಕಿತವಾಗಿದೆ.
ಸಂಪರ್ಕ ಸಂಖ್ಯೆ: 9740437617