Advertisement

ಪುಣೆ ಫಿಲಂ ಇನ್ಸ್ಟಿಟ್ಯೂಟ್‌ಗೆ ಅನುಪಮ್‌ ಖೇರ್‌ ನೇಮಕ

07:05 AM Oct 12, 2017 | Harsha Rao |

ಹೊಸದಿಲ್ಲಿ: ಪುಣೆಯಲ್ಲಿರುವ ಪ್ರತಿಷ್ಠಿತ “ಫಿಲ್ಮ್ ಆ್ಯಂಡ್‌ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ ಆಫ್ ಇಂಡಿಯಾ’ದ (ಎಫ್ಟಿಐಐ) ಮುಖ್ಯಸ್ಥರಾಗಿ ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್‌ ಖೇರ್‌ರನ್ನು ನೇಮಿಸಲಾಗಿದೆ. ಹಾಲಿ ಅಧ್ಯಕ್ಷ ಗಜೇಂದ್ರ ಚೌಹಾಣ್‌ರ ಅಧಿಕಾರದ ಅವಧಿ ಮಾರ್ಚ್‌ ನಲ್ಲಿ ಮುಕ್ತಾಯ  ಗೊಂಡಿದ್ದರೂ, ಅವರನ್ನು ಮುಂದು ವರಿಸಲಾ ಗಿತ್ತು. ಚೌಹಾಣ್‌ ನೇಮಕ ಖಂಡಿಸಿ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ, ತರಗತಿ ಬಹಿಷ್ಕರಿಸಿದ್ದರು. 
ಕೇಂದ್ರ ಸರಕಾರ ತಮಗೆ ವಹಿಸಿರುವ ಹೊಸ ಜವಾಬ್ದಾರಿ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, “ಸರಕಾರ ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಎಫ್ಟಿಐಐನ ಏಳ್ಗೆಗಾಗಿ ನಾನು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದಿದ್ದಾರೆ. 

Advertisement

ದಿಲ್ಲಿಯಲ್ಲಿನ “ನ್ಯಾಶನಲ್‌ ಸ್ಕೂಲ್‌ ಆಫ್ ಡ್ರಾಮಾ’ ದಿಂದ (ಎನ್‌ಎಸ್‌ಡಿ) ಹೊರಬಂದ ಪ್ರತಿಭೆಯಾಗಿರುವ ಖೇರ್‌, ಈ ವರೆಗೆ 500 ಸಿನಿಮಾ ಸಹಿತ ಹಲವಾರು ನಾಟಕಗಳಲ್ಲಿ ಅಭಿನಯಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next