Advertisement

ಗಣರಾಜ್ಯೋತ್ಸವದಲ್ಲಿ ಅನುಭವ ಮಂಟಪ

11:05 PM Dec 27, 2019 | Team Udayavani |

ಬೆಂಗಳೂರು: ನವದೆಹಲಿಯಲ್ಲಿ ಜನವರಿ 26 ರಂದು ಜರುಗಲಿರುವ 2020 ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಕರ್ನಾಟಕದ ಅನುಭವ ಮಂಟಪ ಸ್ತಬ್ಧಚಿತ್ರವು ಆಯ್ಕೆಯಾಗಿದೆ. ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ 12 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಅನುಭವ ಮಂಟಪವು ಸಾಮಾಜಿಕ, ಧಾರ್ಮಿಕ, ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಮಾನವ ಸಮಾಜದ ಅಭಿವೃದ್ಧಿ ಮಾದರಿಯಾಗಿದೆ.

Advertisement

ಈ ಅನುಭವ ಮಂಟಪದ ಸ್ಥಬ್ಧಚಿತ್ರವನ್ನು ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಪೂರ್ಣಗೊಂಡ ಹಾಗೂ ಸ್ವತಂತ್ರ ಗಣರಾಜ್ಯವಾಗಿರುವ ಈ ಸಂದರ್ಭದಲ್ಲಿ ಪ್ರದರ್ಶಿಸುತ್ತಿರುವುದು ವಿಶೇಷ. ಇನ್ನು ನವದೆಹಲಿಯ ಗಣರಾಜ್ಯೋತ್ಸವ ಪ್ರದರ್ಶನಕ್ಕೆ ಕರ್ನಾಟಕ ಸ್ತಬ್ಧಚಿತ್ರವು ಸತತ ಹನ್ನೊಂದನೇ ಬಾರಿಗೆ ಆಯ್ಕೆಗೊಂಡಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್‌.ಎನ್‌. ಸಿದ್ದರಾಮಪ್ಪ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next