Advertisement

Olympic controversy ಬಳಿಕ ಭಾರತಕ್ಕೆ ಮರಳಿರುವ ಅಂತಿಮ್‌ ಪಂಘಲ್‌

06:05 PM Aug 09, 2024 | Team Udayavani |

ಹೊಸದಿಲ್ಲಿ: ಪ್ಯಾರಿಸ್‌ನ ಒಲಿಂಪಿಕ್ ಕ್ರೀಡಾಕೂಟದ ಅಥ್ಲೀಟ್‌ಗಳ ಗ್ರಾಮದಲ್ಲಿ ಶಿಸ್ತಿನ ಉಲ್ಲಂಘನೆಯ ನಂತರ ತನ್ನನ್ನು ತಾನು ವಿವಾದದಲ್ಲಿ ಸಿಲುಕಿಸಿಕೊಂಡ ಭಾರತೀಯ ಕುಸ್ತಿಪಟು ಅಂತಿಮ್‌ ಪಂಘಲ್‌ ಶುಕ್ರವಾರ ಭಾರತಕ್ಕೆ ಮರಳಿದ್ದಾರೆ.

Advertisement

53 ಕೆ.ಜಿ. ಕುಸ್ತಿಯ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದ ಅಂತಿಮ್‌ ಪಂಘಲ್‌, ವಿವಾದಗಳ ಮೇಲೆ ವಿವಾದಕ್ಕೆ ತುತ್ತಾಗಿದ್ದರು. ಅಕ್ರೆಡಿಟೇಶನ್‌ ಕಾರ್ಡ್‌ ಬಳಸಿ ಅವರ ತಂಗಿ ನಿಶಾ ಕ್ರೀಡಾಗ್ರಾಮಕ್ಕೆ ಪ್ರವೇಶಿಸಿದ್ದರು. ಪ್ಯಾರಿಸ್‌ ಪೊಲೀಸರು ನಿಶಾರನ್ನು ಬಂಧಿಸಿದ್ದಾರೆ ಎನ್ನಲಾಗಿತ್ತು. ಆದರೆ ಒಲಿಂಪಿಕ್‌ ಸಂಘಟಕರು ಅಂತಿಮ್‌ ಅಕ್ರೆಡಿಟೇಶನ್‌ ಕಾರ್ಡ್‌ ರದ್ದು ಮಾಡಿ, ತಮ್ಮ ಸಹಾಯಕ ಸಿಬಂದಿ ಸಮೇತ ಮರಳಲು ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಅಂತಿಮ್‌ ಪಂಘಲ್‌ ಅವರನ್ನು 3 ವರ್ಷ ಸ್ಪರ್ಧೆ ಗಳಿಂದ ನಿಷೇಧಿಸುವ ಯಾವುದೇ ಉದ್ದೇಶ ನಮ್ಮ ಮುಂದಿಲ್ಲ ಎಂದು IOA (ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ) ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ಅಂತಿಮ್‌ರನ್ನು ಐಒಎ 3 ವರ್ಷ ನಿಷೇಧಿಸುತ್ತದೆ ಎಂಬ ಸುದ್ದಿಗಳು ಹರಿದಾಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next