Advertisement

ಮನೆಯಲ್ಲೇ ಇದೆ ಆ್ಯಂಟಿ ಬಯೋಟಿಕ್‌

09:18 AM Mar 06, 2018 | |

ವೈದ್ಯರು ಔಷಧದಲ್ಲಿ ಆ್ಯಂಟಿ ಬಯೋಟಿಕ್‌ಗಳನ್ನು ಕೊಡುವುದು ಸಾಮಾನ್ಯ. ಇದು ಹಲವು ರೋಗಗಳು, ಅಡ್ಡ ಪರಿಣಾಮಗಳನ್ನು ತಡೆಗಟ್ಟುತ್ತದೆ ಎಂಬ ಕಾರಣಕ್ಕೆ ನಾವು ಅದನ್ನು ಸ್ವೀಕರಿಸುತ್ತೇವೆ. ಆ್ಯಂಟಿ ಬಯೋಟಿಕ್‌ ಕೇವಲ ಅಲೋಪತಿ ಮೆಡಿಸಿನ್‌ನಲ್ಲಿ ಮಾತ್ರ ಇರುವುದಲ್ಲ ನಮ್ಮ ಅಡುಗೆ ಮನೆಯಲ್ಲೂ ಇದೆ. ನೈಸರ್ಗಿ ಕವಾಗಿ ದೊರೆಯುವ ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮಾತ್ರವಲ್ಲ ಇವುಗಳ ಬಳಕೆ ಆರೋಗ್ಯದ ದೃಷ್ಟಿಯಿಂದ  ಹೆಚ್ಚುಸುರಕ್ಷಿತವೂ ಆಗಿದೆ ಎಂಬುದು ವೈಜಾನಿಕ ಸಂಶೋಧನೆಯಿಂದಲೂ ದೃಢಪಟ್ಟಿದೆ. ಅವು ಯಾವುವು ಗೊತ್ತೇ?

Advertisement

  ಬೆಳ್ಳುಳ್ಳಿ
ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣ ಹೊಂದಿರುವ ಬೆಳ್ಳುಳ್ಳಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಅಲರ್ಜಿ, ಅಸ್ತಮಾ, ಶೀತ, ಕೆಮ್ಮು ನಿವಾರಣೆ ಮಾಡುವ ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ.

  ಜೇನು ತುಪ್ಪ
ಹಲವು ಸೋಂಕುರೋಗಗಳನ್ನು ತಡೆಗಟ್ಟುವ ಜೇನುತುಪ್ಪ ಮನೆ ಮದ್ದಿನಲ್ಲಿ ಪ್ರಮುಖ ಸ್ಥಾನಗಿಟ್ಟಿಸಿಕೊಂಡಿದೆ. ಸುಟ್ಟ  ಗಾಯ, ಚರ್ಮದ ತೊಂದರೆ, ಕಲೆಗಳನ್ನು ನಿವಾರಿಸುವಲ್ಲಿ ಜೇನು ತುಪ್ಪ ಔಷಧವಾಗಿ ಬಳಕೆಯಾಗುತ್ತದೆ.

  ಶುಂಠಿ
ಶುಂಠಿ ಕೂಡ ಬ್ಯಾಕ್ಟೀರಿಯಾಗಳ ವಿರುದ್ಧ  ಹೋರಾಡುತ್ತದೆ. ನಿಶ್ಶಕ್ತಿ, ರಕ್ತದೊತ್ತಡ, ವಾಕರಿಕೆ ಸಮಸ್ಯೆಯನ್ನು ನಿಯಂತ್ರಿಸುವ ಗುಣ ಹೊಂದಿರುವ ಗಂಟಲಿನ ತುರಿಕೆ, ಶುಂಠಿ ಕೆಮ್ಮು, ಶೀತಕ್ಕೂ ಅತ್ಯುತ್ತಮ  ಔಷಧವಾಗಿದೆ.

  ಲವಂಗ
ಹಲ್ಲಿನ ಹಲವು ಸಮಸ್ಯೆಗಳಿಗೆ ಲವಂಗವನ್ನು ಬಳ ಸು ತ್ತೇವೆ. ಲವಂಗದ ನೀರನ್ನು ಪ್ರತಿನಿತ್ಯ 1/2 ಚಮಚ ಸೇವನೆ ಮಾಡುವುದ ರಿಂದ ದೇಹದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣ ಹೆಚ್ಚಾಗುತ್ತದೆ.

Advertisement

 ವಿದ್ಯಾ ಕೆ. ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next