Advertisement

Sri Lanka ಕ್ರಿಕೆಟ್ ಗೆ ಮತ್ತೊಂದು ಆಘಾತ; ಕೈತಪ್ಪಿದ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಆತಿಥ್ಯ

06:20 PM Nov 21, 2023 | Team Udayavani |

ದುಬೈ: ಇತ್ತೀಚೆಗೆ ನಡೆದ ಕ್ರಿಕೆಟ್ ವಿಶ್ವಕಪ್ ನಲ್ಲಿ ರೌಂಡ್ ರಾಬಿನ್ ಹಂತದಲ್ಲಿಯೇ ಹೊರಬಿದ್ದು, ಸರ್ಕಾರದ ಅತಿಯಾದ ಮಧ್ಯಸ್ಥಿಕೆಯ ಕಾರಣದಿಂದ ಐಸಿಸಿಯಿಂದ ಬ್ಯಾನ್ ಗೆ ಒಳಗಾಗಿರುವ ಶ್ರೀಲಂಕಾ ಕ್ರಿಕೆಟ್ ಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ.

Advertisement

2024ರ ಐಸಿಸಿ ಪುರುಷರ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಇದೀಗ ನಡೆದ ಬೆಳವಣಿಗೆಯಲ್ಲಿ ಈ ವಿಶ್ವಕಪ್ ಕೂಟವನ್ನು ದ್ವೀಪರಾಷ್ಟ್ರದಿಂದ ಐಸಿಸಿ ಸ್ಥಳಾಂತರಿಸಿದೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ಅಂಡರ್ 19 ಕ್ರಿಕೆಟ್ ವಿಶ್ವಕಪ್ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಇತ್ತೀಚೆಗೆ ಸದಸ್ಯರಾಗಿ ತನ್ನ ಜವಾಬ್ದಾರಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಐಸಿಸಿ ಅಮಾನತುಗೊಳಿಸಿದೆ, ವ್ಯವಹಾರಗಳನ್ನು ಸ್ವಾಯತ್ತವಾಗಿ ಮತ್ತು ಸರ್ಕಾರದ ಹಸ್ತಕ್ಷೇಪವಿಲ್ಲದೆ ನಿರ್ವಹಿಸಲು ವಿಫಲವಾದ ಕಾರಣ ಲಂಕಾ ಮಂಡಳಿ ಅಮಾನತಾಗಿದೆ.

ಇದನ್ನೂ ಓದಿ:Goa: 54 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ- ಸಿನಿ ತಾರೆಯರು ಭಾಗಿ

ಆದರೆ ಶ್ರೀಲಂಕಾ ದ್ವಿಪಕ್ಷೀಯ ಕ್ರಿಕೆಟ್ ಮತ್ತು ಐಸಿಸಿ ಈವೆಂಟ್‌ ಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಬಹುದು ಎಂದು ಮಂಡಳಿಯ ಸಭೆಯ ನಂತರ ಬಹಿರಂಗಪಡಿಸಲಾಯಿತು. ಆದರೆ ಲಂಕಾ ಕ್ರಿಕೆಟ್ ಗೆ ಧನಸಹಾಯವನ್ನು ಐಸಿಸಿ ನಿಯಂತ್ರಿಸುತ್ತದೆ. ಇದರ ಪರಿಣಾಮವಾಗಿ, ಅಂಡರ್ 19 ವಿಶ್ವಕಪ್ ಕೂಟವನ್ನು ಸ್ಥಳಾಂತರಿಸಲಾಗಿದೆ.

Advertisement

ಭಾಗವಹಿಸುವ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಭಾರತವು ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಯುಎಸ್‌ಎ ಜತೆ ಎ ಗುಂಪಿನಲ್ಲಿ ಸೇರಿಕೊಂಡಿದೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ಸೇರಿವೆ. ಸಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಇದ್ದರೆ, ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ನೇಪಾಳವು ಡಿ ಗುಂಪಿನಲ್ಲಿದೆ.

ಜನವರಿಯಲ್ಲಿ ಆರಂಭವಾಗಲಿರುವ ಟೂರ್ನಿಯು 41 ಪಂದ್ಯಗಳನ್ನು ಒಳಗೊಂಡಿದ್ದು, ಫೆಬ್ರವರಿಯಲ್ಲಿ ಫೈನಲ್ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next