Advertisement

‘ತೂತು ಮಡಿಕೆ’ತಂಡದಿಂದ ಮತ್ತೂಂದು ಸಿನಿಮಾ: ಚಂದ್ರಕೀರ್ತಿ ನಿರ್ದೇಶನ

03:52 PM Dec 24, 2022 | Team Udayavani |

“ತೂತು ಮಡಿಕೆ’ ಸಿನಿಮಾ ಮೂಲಕ ಗಮನ ಸೆಳೆದಿರುವ ಯುವ ನಿರ್ದೇಶಕ ಕಂ ನಟ ಚಂದ್ರಕೀರ್ತಿ ಮತ್ತೂಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಬಾರಿ ಲವ್‌ ಹಾಗೂ ಆ್ಯಕ್ಷನ್‌ ಸಬ್ಜೆಕ್ಟ್ ಒಳಗೊಂಡ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಸಿನಿಮಾದ ಪೂರ್ವ ತಯಾರಿ ನಡೆಯುತ್ತಿದೆ.

Advertisement

ಹೊಸ ಚಿತ್ರದ ಬಗ್ಗೆ ಮಾತನಾಡುವ ಚಂದ್ರಕೀರ್ತಿ, “”ತೂತು ಮಡಿಕೆ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸ್ಫೂರ್ತಿಯಿಂದಲೇ ಮತ್ತೂಂದು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದೇನೆ. ಈ ಚಿತ್ರದಲ್ಲಿ ನಾಯಕ ನಟನಾಗಿ ನಾನೇ ನಟಿಸುತ್ತಿದ್ದೇನೆ. ಕೊನೆಯ ಹಂತದ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಹಾಗೂ ತಂಡ ನಿರತರಾಗಿದ್ದೇವೆ. ಇದು ಲವ್‌ ಹಾಗೂ ಆ್ಯಕ್ಷನ್‌ ಸಬೆjಕ್ಟ್ ಸಿನಿಮಾ. ಹಳ್ಳಿ ಹಾಗೂ ಕಾಡಿನ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ. ಚಿತ್ರದ ನಾಯಕಿ ಹಾಗೂ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಫೆಬ್ರವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್‌ ಮಾಡಿಕೊಂಡಿದ್ದೇವೆ. “ತೂತು ಮಡಿಕೆ’ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್‌ ಮಧುಸೂಧನ್‌ ರಾವ್‌ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ’ ಎಂದು ವಿವರ ನೀಡುತ್ತಾರೆ.

“ಸಿಲಿಕಾನ್‌ ಸಿಟಿ’, “ಕಿಸ್‌’, “ಮೂಕವಿಸ್ಮಿತ’, “ಬೆಂಕಿ’ ಸಿನಿಮಾದಲ್ಲಿ ನಟಿಸಿರುವ ಚಂದ್ರ ಕೀರ್ತಿ ಹಲವು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. “ತೂತು ಮಡಿಕೆ’ ಮೂಲಕ ನಿರ್ದೇಶಕ ಕಂ ನಟನಾಗಿ ಹೊಸ ಜರ್ನಿ ಆರಂಭಿಸಿ ಭರವಸೆ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next