Advertisement
ರಾಜ್ಯದ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಕೇಂದ್ರ ಚುನಾವಣ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಡಿ. 10ರಂದು ಚುನಾವಣೆ, ಡಿ. 14ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನ. 23 ಕೊನೆಯ ದಿನ. ಈ 25 ಸದಸ್ಯರ ಅವಧಿ 2022ರ ಜ. 5ಕ್ಕೆ ಕೊನೆಗೊಳ್ಳಲಿದೆ. ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತತ್‌ಕ್ಷಣ ದಿಂದಲೇ ಚುನಾವಣ ನೀತಿ ಸಂಹಿತೆ ಜಾರಿಯಾಗಿದೆ.
Related Articles
Advertisement
ಚುನಾವಣ ನೀತಿ ಸಂಹಿತೆ ತತ್‌ಕ್ಷಣದಿಂದ ಜಾರಿಗೆಚುನಾವಣ ನೀತಿ ಸಂಹಿತೆ ತತ್‌ಕ್ಷಣದಿಂದ ಜಾರಿಗೆ ಬಂದಿದೆ. ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳು ರಾಜ್ಯಾದ್ಯಂತ ವ್ಯಾಪಿಸಿದ್ದು, ಬಹುತೇಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವತ್ರಿಕ ಚುನಾವಣೆ ಸಂದರ್ಭ ಜಾರಿಯಾಗುವ ಮಾದರಿಯದೇ ನೀತಿ ಸಂಹಿತೆ ಈ ಚುನಾವಣೆಗೂ ಅನ್ವಯವಾಗಲಿದೆ ಎಂದು ಚುನಾವಣ ಆಯೋಗ ತಿಳಿಸಿದೆ. ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳು
ಬೀದರ್, ಕಲಬುರಗಿ, ವಿಜಯಪುರ (ದ್ವಿಸದಸ್ಯ), ಬೆಳಗಾವಿ (ದ್ವಿಸದಸ್ಯ), ಉತ್ತರ ಕನ್ನಡ, ಧಾರವಾಡ (ದ್ವಿಸದಸ್ಯ), ರಾಯಚೂರು-ಕೊಪ್ಪಳ (ಎರಡು ಜಿಲ್ಲೆ, ಒಬ್ಬ ಸದಸ್ಯ), ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ (ದ್ವಿಸದಸ್ಯ), ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು (ದ್ವಿಸದಸ್ಯ). ವೇಳಾಪಟ್ಟಿ
ಅಧಿಸೂಚನೆ ಪ್ರಕಟ: ನ. 16
ನಾಮಪತ್ರ ಸಲ್ಲಿಸಲು
ಕೊನೆಯ ದಿನ: ನ. 23
ನಾಮಪತ್ರ ಪರಿಶೀಲನೆ: ನ. 24
ನಾಮಪತ್ರ ವಾಪಸ್‌ಗೆ ಕೊನೆಯ ದಿನ: ನ. 26
ಮತದಾನ: ಡಿ. 10;
ಬೆಳಗ್ಗೆ 8ರಿಂದ ಸಂಜೆ 4
ಮತ ಎಣಿಕೆ: ಡಿ. 14 ಪೂರ್ಣ ಬಹುಮತಕ್ಕೆ ಬೇಕು 38 ಸ್ಥಾನ
-ಒಟ್ಟು 75 ಸ್ಥಾನಗಳ ವಿಧಾನಪರಿಷತ್ತಿನಲ್ಲಿ ಪೂರ್ಣ ಬಹುಮತಕ್ಕೆ 38 ಸ್ಥಾನಗಳು ಬೇಕು.
-ಸದ್ಯ 32 ಸ್ಥಾನ ಹೊಂದಿರುವ ಬಿಜೆಪಿ ಬಲಾಡ್ಯ. ಪೂರ್ಣ ಬಹುಮತಕ್ಕೆ ಈಗಿನ ಸ್ಥಳೀಯ ಸಂಸ್ಥೆಗಳ 6 ಸ್ಥಾನಗಳನ್ನು ಮರಳಿ ಗಳಿಸಿಕೊಂಡು ಹೆಚ್ಚುವರಿಯಾಗಿ 6 ಸ್ಥಾನ ಗೆಲ್ಲಬೇಕು.
-29 ಸ್ಥಾನಗಳ ಜತೆಗೆ ಒಬ್ಬರು ಪಕ್ಷೇತರರ ಬೆಂಬಲದೊಂದಿಗೆ 30 ಸ್ಥಾನ ಹೊಂದಿರುವ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ 14 ಸ್ಥಾನಗಳನ್ನು ಉಳಿಸಿಕೊಂಡು ಹೆಚ್ಚುವರಿಯಾಗಿ 8ರಿಂದ 9 ಸ್ಥಾನ ಗೆಲ್ಲಬೇಕು.
-2022ರ ಜೂನ್-ಜುಲೈ ವೇಳೆಗೆ ಮತ್ತೆ 10 ಸ್ಥಾನಗಳು ಖಾಲಿ ಯಾಗಲಿದ್ದು, ಬಹುಮತ ಲೆಕ್ಕಾಚಾರ ಮತ್ತೆ ಏರುಪೇರು ಆಗಲಿದೆ.