Advertisement

Pakistan: ಮತ್ತೊಬ್ಬ ಲಷ್ಕರ್‌ ಉಗ್ರ, ಆತನ ಸಹಚರ ಅಪರಿಚಿತರ ಗುಂಡಿಗೆ ಬಲಿ

04:00 PM Nov 15, 2023 | Nagendra Trasi |

ಇಸ್ಲಾಮಾಬಾದ್:‌ ಲಷ್ಕರ್‌ ಇ ತೊಯ್ಬಾದ ಭಯೋತ್ಪಾದಕರಾದ ಮೊಹಮ್ಮದ್‌ ಮುಝಾಮಿಲ್‌ ಹಾಗೂ ಆತನ ನಿಕಟವರ್ತಿ ನಯೀಮುರ್‌ ರಹಮಾನ್‌ ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಬುಧವಾರ (ನವೆಂಬರ್‌ 15) ಪಾಕಿಸ್ತಾನದ ಸಿಯಾಲ್‌ ಕೋಟ್‌ ನ ಖೋಖ್ರಾನ್‌ ಚೌಕ್‌ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ನಾಲ್ವರ ಹ*ತ್ಯೆ ಪ್ರಕರಣ: ಸಂಜೆಯೊಳಗೆ ಪೂರ್ಣ ಚಿತ್ರಣ ಸಿಗಲಿದೆ;ಎಸ್.ಪಿ. ಹೇಳಿಕೆ

ಉಗ್ರರನ್ನು ಯಾರು ಗುಂಡು ಹಾರಿಸಿ ಕೊಂದಿದ್ದಾರೆ ಎಂಬುದು ಇದೂ ಕೂಡಾ ನಿಗೂಢವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ. ಬೈಕ್‌ ನಲ್ಲಿ ಆಗಮಿಸಿದ್ದ ಇಬ್ಬರು ಆಗಂತುಕರು ಪಿಸ್ತೂಲ್‌ ನಿಂದ ಮುಝಾಮಿಲ್‌ ಮತ್ತು ನಯೀಮುರ್‌ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ದೃಶ್ಯವಿದೆ.

ಘಟನೆಯಲ್ಲಿ ಮೂರನೇ ವ್ಯಕ್ತಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ಇತ್ತೀಚೆಗಷ್ಟೇ ಮೋಸ್ಟ್‌ ವಾಂಟೆಡ್‌ ಉಗ್ರ ಮೌಲಾನಾ ಮಸೂದ್‌ ಅಝರ್‌ ನಿಕಟವರ್ತಿ ದಾವೂದ್‌ ಮಲಿಕಕ್‌ ನನ್ನು ಉತ್ತರ ವಜಿರಿಸ್ತಾನದಲ್ಲಿ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ನಡೆದಿತ್ತು.

ಉತ್ತರ ವಜಿರಿಸ್ಥಾನದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಆಗಂತುಕರು ದಾವೂದ್‌ ಮೇಲೆ ಗುಂಡಿನ ದಾಳಿ ನಡೆಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next