ಲಂಡನ್: ಹಲವು ವರ್ಷಗಳ ಹಿಂದೆ ಮಾಡಿದ್ದ ವಿವಾದಾತ್ಮಕ ಟ್ವೀಟ್ ಕಾರಣದಿಂದ ಇಂಗ್ಲೆಂಡ್ ವೇಗಿ ಒಲಿ ರಾಬಿನ್ಸನ್ ರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಲಾಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಆಂಗ್ಲ ಆಟಗಾರನ ಮೇಲೆ ಇದೇ ಸಂಬಂಧಿತ ವಿಚಾರದಲ್ಲಿ ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧಿಕೃತ ವಕ್ತಾರ ಮಾಹಿತಿ ನೀಡಿದ್ದಾರೆ. ಆದರೆ ಆ ಆಟಗಾರ ಯಾರು ಮತ್ತು ಆತ ಮಾಡಿರುವ ಟ್ವೀಟ್ ಏನು ಎಂಬುವುದನ್ನು ಇಸಿಬಿ ಬಹಿರಂಗ ಪಡಿಸಿಲ್ಲ.
ಇದನ್ನೂ ಓದಿ:ಲಿಯೋನೆಲ್ ಮೆಸ್ಸಿ ದಾಖಲೆ ಮುರಿದ ಭಾರತ ಫುಟ್ ಬಾಲ್ ನಾಯಕ ಸುನೀಲ್ ಚೇತ್ರಿ
ಆಟಗಾರನು 16 ವರ್ಷದವನಿದ್ದಾಗ ಈ ಟ್ವೀಟ್ ಮಾಡಿದ್ದ. ಇದರ ಬಗ್ಗೆ ನಾವು ತನಿಖೆ ಮಾಡುತ್ತೇವೆ. ಮುಂದಿನ ಕ್ರಮಗಳನ ಬಗ್ಗೆ ತಿಳಿಸುತ್ತೇವೆ ಎಂದು ಇಸಿಬಿ ವಕ್ತಾರ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಒಲಿ ರಾಬಿನ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಏಳು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಆದರೆ 2012 ಮತ್ತು 2013ರಲ್ಲಿ ಮಾಡಿದ್ದ ಎರಡು ಟ್ವೀಟ್ ಇದೀಗ ವೈರಲ್ ಆಗಿ ಇಸಿಬಿ ತನಿಖೆ ಮಾಡಿತ್ತು. ತನಿಖೆಯ ಬಳಿಕ ರಾಬಿನ್ಸನ್ ರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಮಾನತು ಮಾಡಿದೆ. ಇದೀಗ ಮತ್ತೋರ್ವ ಆಟಗಾರನ ಮೇಲೆ ತನಿಖೆ ನಡೆಯುತ್ತಿದೆ.