ವಿಜಯಪುರ: ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಮತ್ತೆ ಭೂಕಂಪದ ಅನುಭವ ಆಗಿದೆ. ಜಿಲ್ಲೆಯಲ್ಲಿ ಎರಡನೇ ಬಾರಿ ಭೂಕಂಪವಾಗಿದೆ. ಬೆ. 8-18 ರಿಂದ 8-20 ರಲ್ಲಿ ನಡುವೆ ಭೂಮಿ ಕಂಪಿಸಿದೆ.
ಹಗಲು ವೇಳೆ ಭೂಕಂಪನ ಆಗಿರುವ ಕಾರಣ ಭೂಮಿ ಕಂಪಿಸಿದ ತೀವ್ರತೆ ಹೆಚ್ಚಾಗಿ ಅನುಭವಕ್ಕೆ ಬಂದಿಲ್ಲ.
ಇದನ್ನೂ ಓದಿ:ಕುರಿಗಾಹಿಗಳನ್ನು ಬೆದರಿಸಿ ಕುರಿ ಕಳ್ಳತನ ಯತ್ನ: ಪರಾರಿಯಾಗುವ ಭರದಲ್ಲಿ ಕಳ್ಳರ ಕಾರು ಪಲ್ಟಿ!
ಕಳೆದ ಶನಿವಾರ ಮಧ್ಯ ರಾತ್ರಿ 11-47 ಹಾಗೂ 11-49 ರ ಮಧ್ಯಾವಧಿಯಲ್ಲಿ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ 3.9 ಇತ್ತು ಎಂದು ಆಲಮಟ್ಟಿ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಆದರೆ ಭೂಕಂಪ ಮಹಾರಾಷ್ಟ್ರದ ಕೊಲ್ಹಾಪುರ ಬಳಿ ಕೇಂದ್ರಿತವಾಗಿತ್ತು. ಇದರ ಭಾಗಶಃ ಪರಿಣಾಮ ವಿಜಯಪುರ ಜಿಲ್ಲೆಗೆ ಆಗಿದೆ. ಹೀಗಾಗಿ ಜನರು ಭಯ ಪಡುವ ಅಗತ್ಯವಿಲ್ಲ ಎಂದು ಸ್ಥಳಕ್ಕೆ ಬಂದು ಅಧ್ಯಯನ ನಡೆಸಿದ್ದ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಘಟಕದ ಭೂಗರ್ಭ ತಜ್ಞರು ಸ್ಪಷ್ಟಪಡಿಸಿದ್ದರು.
ಹೀಗಿದ್ದೂ ಕೂಡ ವಾರದ ಅಂತರದಲ್ಲಿ ಮತ್ತೆ ಭೂಮಿ ಕಂಪಿಸುದ್ದು, ಜನರನ್ನು ಆತಂಕಕ್ಕೆ ಈಡುಮಾಡಿದೆ.