Advertisement

ಭೂಮಿಯನ್ನು ಹೋಲುವ ಮತ್ತೂಂದು ಗ್ರಹ ಪತ್ತೆ

02:55 AM Jun 09, 2020 | Hari Prasad |

ಭೂಮಿಯನ್ನು ಹೋಲುವ ಅನ್ಯ ಗ್ರಹಗಳ ಹುಡುಕಾಟದಲ್ಲಿರುವ ಖಗೋಳ ವಿಜ್ಞಾನಿಗಳು, ಇತ್ತೀಚೆಗೆ ಭೂಮಿಯ ವಾತಾವರಣವನ್ನೇ ಹೊಂದಿರುವ ಹೊಸ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ.

Advertisement

ಅದಕ್ಕೆ ‘ಪ್ಲಾನೆಟ್‌ ಕೆಒಐ- 456.04’ ಎಂದು ಹೆಸರಿಡಲಾಗಿದೆ. ಇದು ನಾವು ವಾಸಿರುವ ಭೂಮಿಯಷ್ಟೇ ದೊಡ್ಡದಾಗಿದ್ದು, ಭೂಮಿಯಿಂದ 3,000 ಜ್ಯೋತಿರ್ವರ್ಷಗಳಷ್ಟು ದೂರವಿದೆ.

ಏನಿದರ ವಿಶೇಷ?
ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, “ಪ್ಲಾನೆಟ್‌ ಕೆಒಐ-456.04′ ಮತ್ತು ನಮ್ಮ ಭೂಮಿ, ಸೂರ್ಯನಿಂದ ಒಂದೇ ಅಂತರದಲ್ಲಿವೆ. ಆದರೂ, ಸೂರ್ಯನನ್ನು ಒಂದು ಸುತ್ತು ಹಾಕಲು ನಮ್ಮ ಭೂಮಿ 365 ದಿನ ತೆಗೆದುಕೊಂಡರೆ, “ಪ್ಲಾನೆಟ್‌ ಕೆಒಐ-456.04′ ಗ್ರಹವು 378 ದಿನ ತೆಗೆದುಕೊಳ್ಳುತ್ತದೆ.

ಆ ಗ್ರಹವೂ ಕೂಡ ಭೂಮಿಯಂತೆಯೇ, ಸೂರ್ಯನಿಂದ ಬರುವ ಬೆಳಕಿನ ಶೇ. 93ರಷ್ಟನ್ನು ಪಡೆದುಕೊಳ್ಳುತ್ತದೆ. ಆದರೆ, ಅದರ ಮೇಲಿನ ವಾತಾವರಣ ಭೂಮಿಯನ್ನು ಹೋಲುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. 2026ರಲ್ಲಿ ಉಡಾವಣೆಗೊಳ್ಳಲಿರುವ ನಾಸಾದ ಜೇಮ್ಸ್‌ ವೆಬ್‌ ಸ್ಪೇಸ್‌ ಟೆಲಿಸ್ಕೋಪ್‌ ಹಾಗೂ ಇಎಸ್‌ಎ ಪ್ಲಾಟೋ ಸ್ಪೇಸ್‌ ಟೆಲಿಸ್ಕೋಪ್‌ಗಳಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗಬಹುದು.

ನಾಲ್ಕನೇ ಗ್ರಹ
ಇತ್ತೀಚೆಗೆ, ಭೂಮಿಯಷ್ಟೇ ದೊಡ್ಡದಾಗಿರುವ ಸೂಪರ್‌ ಅರ್ತ್‌, ಕೆಪ್ಲರ್‌-452ಬಿ ಎಂಬ ಗ್ರಹಗಳನ್ನು ಪತ್ತೆ ಹಚ್ಚಲಾಗಿತ್ತು. ಅದರ ಬೆನ್ನಲ್ಲೇ ಪೋಕ್ಸಿಮಾ ಬಿ ಎಂಬ ಮತ್ತೂಂದು ಗ್ರಹ ಪತ್ತೆಯಾಗಿತ್ತು. ಈಗ, “ಪ್ಲಾನೆಟ್‌ ಕೆಒಐ- 456.04′ ಗ್ರಹವನ್ನು ಪತ್ತೆ ಹಚ್ಚಲಾಗಿದೆ.

Advertisement

3,000 ಜ್ಯೋತಿರ್ವರ್ಷ: ಭೂಮಿಗೂ, ಹೊಸ ಗ್ರಹಕ್ಕೂ ಇರುವ ದೂರ

365 ದಿನ: ಸೂರ್ಯನ ಒಂದು ಪ್ರದಕ್ಷಿಣೆಗೆ ಭೂಮಿ ತೆಗೆದುಕೊಳ್ಳುವ ಅವಧಿ


378 : ಸೂರ್ಯನನ್ನು ಒಂದು ಸುತ್ತು ಹಾಕಲು ಪ್ಲಾನೆಟ್‌ ಕೆಒಐ-456.04 ತೆಗೆದುಕೊಳ್ಳುವ ಸಮಯ

Advertisement

Udayavani is now on Telegram. Click here to join our channel and stay updated with the latest news.

Next