ನವದೆಹಲಿ: ಚುನಾವಣೆಗೆ ಕೆಲವೇ ದಿನಗಳು ಇರುವಂತೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ಎದುರಾಗಿದೆ, ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ವಕ್ತಾರ ರೋಹನ್ ಗುಪ್ತಾ ಗುರುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡರು. ಕಳೆದ ತಿಂಗಳು ಕಾಂಗ್ರೆಸ್ ನಿಂದ ಅವಮಾನ ಮತ್ತು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ಕುರಿತು ಹೇಳಿಕೆ ನೀಡಿದ ರೋಹನ್ ಗುಪ್ತಾ, ಪಕ್ಷವು ದಿಕ್ಕು ಮತ್ತು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ, ತಳಮಟ್ಟದಿಂದ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಿದ “ಎಡಪಂಥೀಯ ದೃಷ್ಟಿಕೋನ” ಹೊಂದಿರುವ ಸೊಕ್ಕಿನ ನಾಯಕರಿಗೆ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ.
ಆದರೆ, ಯಾರನ್ನೂ ಹೆಸರಿಸದೆ ಪಕ್ಷದ ವಿರುದ್ಧ ಕಿಡಿಕಾರಿದರು ಅಲ್ಲದೆ ನನ್ನ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಪಕ್ಷದ ಯಾರೊಬ್ಬರೂ ನನ್ನ ತಂದೆಯ ಅರೋಗ್ಯ ವಿಚಾರಿಸಿಲ್ಲ ಎಂದು ಹೇಳಿದ ಅವರು. ಅಧಿಕಾರ ವಹಿಸಿಕೊಂಡಾಗಿನಿಂದ ಹಲವಾರು ಸಮಸ್ಯೆಗಳು, ರಾಷ್ಟ್ರೀಯತೆ, ಸನಾತನ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವುದನ್ನು ನಾನು ಸಹಿಸಲಾರೆನು ಹಾಗಾಗಿ ಈ ಪಕ್ಷದೊಂದಿಗೆ ಮುಂದುವರೆಯುವುದು ಸೂಕ್ತವಲ್ಲ ಎಂದು ನಾನು ನಿರ್ಧರಿಸಿ ಪಕ್ಷದಿಂದ ಹೊರಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.