ನವದೆಹಲಿ : ದಕ್ಷಿಣ ಆಫ್ರಿಕಾದಿಂದ ತಂದ ಏಳನೇ ಚಿರತೆಯ ಮೃತಪಟ್ಟ ಕೆಲವು ದಿನಗಳ ನಂತರ, ನಮೀಬಿಯಾದಿಂದ ಸ್ಥಳಾಂತರಗೊಂಡ ಚೀತಾ ಸೂರಜ್ ಶುಕ್ರವಾರ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೃತಪಟ್ಟಿದೆ. ಇದರೊಂದಿಗೆ ಕಳೆದ ಐದು ತಿಂಗಳ ಅಂತರದಲ್ಲಿ ಒಟ್ಟು ಎಂಟು ಚೀತಾಗಳು ಮೃತಪಟ್ಟಂತಾಗಿದೆ.
ಸೂರಜ್ ಸಾವಿಗೆ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ. ಮಂಗಳವಾರ ಮುಂಜಾನೆ, ಚೀತಾ ತೇಜಸ್ ಗಾಯಗೊಂಡಿತ್ತು ಎಂದು ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಮಾರ್ಚ್ 27 ರಂದು ಮೊದಲ ಚೀತಾ ಸಾಶಾ ಮೃತಪಟ್ಟಿತ್ತು ಇದು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿತ್ತು ಎನ್ನಲಾಗಿದೆ. ಅದೇ ಸಮಯದಲ್ಲಿ, ಸಿಯಾಯಾಗೆ ನಾಲ್ಕು ಮರಿಗಳು ಜನಿಸಿದವು. ಏಪ್ರಿಲ್‌ನಲ್ಲಿ, ದಕ್ಷಿಣ ಆಫ್ರಿಕಾದ ಗಂಡು ಚಿರತೆಗಳಲ್ಲಿ ಒಂದಾದ ಉದಯ್ ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿತು. ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ದಕ್ಷ ಎಂಬ ಹೆಣ್ಣು ಚಿರತೆ ಎರಡು ಗಂಡು ಚಿರತೆಗಳೊಂದಿಗೆ ಕಾದಾಟದ ಬಳಿಕ ಮೃತಪಟ್ಟಿತ್ತು.
ನಮೀಬಿಯಾದಿಂದ ಎಂಟು ಚಿರತೆಗಳನ್ನು ಭಾರತಕ್ಕೆ ತರಲಾಯಿತು ಮತ್ತು ಕಳೆದ ವರ್ಷ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಯಿತು. ಫೆಬ್ರವರಿಯಲ್ಲಿ, ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚಿರತೆಗಳನ್ನು ತರಲಾಯಿತು, ಅವುಗಳಲ್ಲಿ ಆರು ಕಾಡಿನಲ್ಲಿವೆ ಮತ್ತು ಉಳಿದವು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿವೆ.
ಇದನ್ನೂ ಓದಿ: ಶಿಶಿರನ ಊರಿಗೆ ಭಾರತದ ಕನಸಿನ ತೇರು: ಚಂದ್ರಯಾನ-3 ಉಪಗ್ರಹ ಹೊತ್ತ ನೌಕೆ ಯಶಸ್ವಿ ಉಡಾವಣೆ