ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ವಾರ್ಷಿಕ ಮಹಾಸಭೆಯು ಮೇ 20 ರಂದು ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಕುಮಾರಿ ಪ್ರಾಪ್ತಿ ಪ್ರದೀಪ್ ಕುಮಾರ್ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಸಭೆಯು ಚಾಲನೆಗೊಂಡಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಒಕ್ಕೂಟದ ಸದಸ್ಯರನ್ನು ಸ್ವಾಗತಿಸಿ ಒಕ್ಕೂಟದ ಧ್ಯೇಯೋದ್ದೇಶಗಳು ನಡೆದು ಬಂದ ದಾರಿ ಸೇವೆಗೈದವರ ಸಮಾಜ ಬಾಂಧವರನ್ನು ಸ್ಮರಿಸಿ ಮುಂದಕ್ಕೆ ತನ್ನ ಅಭಿವೃದ್ಧಿ ಪಥದಲ್ಲಿ ಸಮಾಜದ ಅಶಕ್ತ ಬಂಧುಗಳಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಸಹಕಾರವನ್ನು ಯಾಚಿಸುತ್ತಾ ತನ್ನ ಪ್ರಾಸ್ತವಿಕ ವರದಿಯನ್ನು ಸಲ್ಲಿಸಿದರು.
ವಾರ್ಷಿಕ ವರದಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ ಅವರು ಮಂಡಿಸಿದರು. ಪರಿಶೋಧಿತ ವಾಷಿ‚ìಕ ಲೆಕ್ಕ ಪತ್ರವನ್ನು ಒಕ್ಕೂಟದ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಅವರು ಸಭೆಗೆ ಮಂಡಿಸಿದರು. ಕ್ರಮನಿಯಮ ಮತ್ತು ನಿಬಂಧನೆಗಳ ತಿದ್ದುಪಡಿಯ ಬಗ್ಗೆ ಬೈಲಾಸ್ ಕಮಿಟಿಯ ಸಂಚಾಲಕರಾದ ನ್ಯಾಯವಾದಿ ಕೆ. ಪೃಥ್ವಿರಾಜ್ ರೈ ಅವರು ಸಭೆಗೆ ಮಾಹಿತಿಯನ್ನು ನೀಡಿದರು. ಕಾರ್ಯದರ್ಶಿ ವಿಜಯ ಪ್ರಸಾದ್ ಆಳ್ವ ಅವರು, ಆಡಳಿತಾತ್ಮಕ ವಿಷಯಳ ಬಗ್ಗೆ ಇರುವ ನ್ಯೂನತೆಗಳನ್ನು ಅನುಸರಿಸುವ, ಕ್ರಮಗಳ ಸಭೆಗೆ ತಿಳಿಸಿದರು.
ನಮ್ಮ ಪೋಷಕ ಸದಸ್ಯತನದ ಬಗ್ಗೆ ಪೋಷಕ ಸದಸ್ಯರುಗಳಾದ ಪ್ರಭಾಕರ ಜೆ. ಶೆಟ್ಟಿ, ಆರ್. ಉಪೇಂದ್ರ ಶೆಟ್ಟಿ, ಶಂಕರ್ ಬಿ. ಶೆಟ್ಟಿ, ವಿರಾರ್, ಪದ್ಮನಾಭ ಎಸ್. ಪಯ್ಯಡೆ, ಉದಯ ಶೆಟ್ಟಿ ಮುನಿಯಾಲ್, ಹರೀಶ್ ಪಾಂಡು ಶೆಟ್ಟಿ, ಜಯರಾಮ್ ಎನ್. ಶೆಟ್ಟಿ, ಸುಧಾಕರ ಎಸ್. ಹೆಗ್ಡೆ, ಶಶಿಧರ ಕೆ. ಶೆಟ್ಟಿ, ಹರೀಶ್ ಶೆಟ್ಟಿ ಗುರ್ಮೆ, ಡಾ| ಪಿ. ವಿ. ಶೆಟ್ಟಿ, ಕೆ. ಡಿ. ಶೆಟ್ಟಿ, ಮೋಹನ್‌ದಾಸ್ ಶೆಟ್ಟಿ, ಉಳೂ¤ರು, ಸಂಜೀವ ಶೆಟ್ಟಿ ಅವರು ನೀಡಿದ ಆರ್ಥಿಕ ದೇಣಿಗೆಯನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ವಿವರಣೆ ನೀಡಿ, ಪ್ರೋತ್ಸಾಹ ಮತ್ತು ಜನಬೆಂಬಲದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗಲ್ಫ್ ರಾಷ್ಟ್ರಗಳಿಂದ ಸಿಕ್ಕಿದ ಅಪಾರ ಪ್ರೋತ್ಸಾಹ ಮತ್ತು ಜನಬೆಂಬಲದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರೂ. 25,00,000 ಕ್ಕೂ ಮಿಕ್ಕಿದ ದೇಣಿಗೆಯನ್ನು ನೀಡಿದ ತೋನ್ಸೆ ಆನಂದ್ ಎಂ. ಶೆಟ್ಟಿ ಅವರ ಕೊಡುಗೆಯನ್ನು ಕೂಡ ಅಪಾರವಾಗಿ ಶ್ಲಾಘಿಸಿದರು. ಇನ್ನೂ ಹಲವು ನಮ್ಮ ಸಮಾಜದ ಶಕ್ತ ಗಣ್ಯರು ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಹಾಗೂ ಇದೇ ಬರುವ ಸೆಪ್ಟಂಬರ್ 9 ರಂದು ವಿಶ್ವ ಬಂಟರ ಸಮ್ಮಿಲನ-2 ನೇ ಭಾಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಉಡುಪಿಯಲ್ಲಿ ಹಮ್ಮಿಕೊಳ್ಳುವುದರ ಪ್ರಯುಕ್ತ ಸಮಾಜ ಬಾಂಧವರಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹಾಗೂ ಸಹಕರಿಸಲು ಕೋರಿದರು. ನಾವೆಲ್ಲರು ಒಂದಾಗಿ ಅಶಕ್ತ ಸಮಾಜ ಬಾಂಧವರಿಗೆ ಸಹಕರಿಸೋಣ ಎಂದು ನುಡಿದು ಶುಭಹಾರೈಸಿದರು. ಒಕ್ಕೂಟದ ಸ್ಥಾಪನೆಗೆ ಕಾರಣಕರ್ತರಾದ ಕೆ. ಬಿ. ಜಯಪಾಲ್ ಶೆಟ್ಟಿ ಮತ್ತು ಬಿ. ರಂಗನಾಥ ಹೆಗ್ಡೆ ಹಾಗೂ ಇತರ ಆಡಳಿತ ಮಂಡಳಿ ಸದಸ್ಯರು ಅಗಲಿರುವ ನಿಮಿತ್ತ ಸಭೆಯು ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಒಕ್ಕೂಟದ ವತಿಯಿಂದ ಅಶಕ್ತ ಸಮಾಜ ಬಂಧುಗಳಿಗೆ ಆರ್ಥಿಕ ಸಹಾಯವನ್ನು ನೀಡಲಾುತು. ಹಾಗೂ ಪೋಷಕ ಸದಸ್ಯರೆಲ್ಲರನ್ನೂ ಅಭಿನಂ ದಿಸಲಾಯಿತು. ಕೊನೆಯಲ್ಲಿ ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಅವರು ವಂದಿಸಿದರು.