Advertisement

ವಿದ್ಯಾರ್ಥಿಗಳ ಸಾಧನೆಯಿಂದ ಶಿಕ್ಷಕರ ಜೀವನ ಸಾರ್ಥಕ: ಸುಮತಿ

09:50 AM Apr 14, 2021 | Team Udayavani |

ಮುಂಬಯಿ: ವಿದ್ಯಾರ್ಥಿಗಳ ಜೀವನದ ಸುವರ್ಣ ಯುಗ ಪ್ರಾರಂಭವಾಗುವುದೇ ಅಧ್ಯಯನ ಹಂತದಲ್ಲಿ. ಒಬ್ಬ ವ್ಯಕ್ತಿ ಜೀವನದಲ್ಲಿ ಆದರ್ಶಮಯವಾಗಿ ಬೆಳೆದಿದ್ದಾನೆ ಎಂದಾದರೆ ಅದಕ್ಕೆ ಪ್ರೇರಕ ಶಕ್ತಿ ಶಿಕ್ಷಣ. ಶಿಕ್ಷಣದಿಂದ ಸದ್ಗುಣಗಳು, ಜ್ಞಾನ ಭಂಡಾರ, ದಯೆ, ಅನುಕಂಪ, ಪರೋಪಕಾರ, ಧಾನ-ಧರ್ಮದ ಸಹೃದಯತೆ ಇನ್ನಿತರ ಮಾನವೀಯ ಗುಣಗಳು ಬೆಳೆಯಲು ಸಾಧ್ಯ. ಮಾತೃಭಾಷೆಯಿಂದಲೇ ಸರ್ವಾಂಗೀಣ ಅಭಿವೃದ್ಧಿ ಯಾಗು ತ್ತದೆ. ಯಾರೂ ಜಾಣರಲ್ಲ, ಯಾರೂ ದಡ್ಡರಲ್ಲ. ಸನ್ಮಾರ್ಗ ವನ್ನು ಅನುಸರಿಸಿದರೆ, ಮನಸ್ಸು ನಿರ್ಮಲವಾಗಿದ್ದರೆ,

Advertisement

ಏಕಾಗ್ರತೆಯ ಪ್ರವೃತ್ತಿಯನ್ನು ಹೊಂದಿದ್ದರೆ ಅದುವೇ ಅವರಿಗೆ ಶ್ರೀರಕ್ಷೆ. ಸುಪ್ತವಾಗಿರುವ ಪ್ರತಿಭೆಯನ್ನು ಅನಾವರಣ ಗೊಳಿಸಲು ಧೈರ್ಯ, ಸ್ಥೈರ್ಯ, ಆತ್ಮವಿಶ್ವಾಸವನ್ನು ಬೆಳೆಸಿ ಕೊಂಡು ಸಾಗಬೇಕು. ವಿದ್ಯಾರ್ಥಿಗಳ ಸಾಧನೆಯಿಂದ ಶಿಕ್ಷಕರ ಜೀವನ ಸಾರ್ಥಕ ಎಂದು ಸಮಾಜ ಸೇವಕಿ ಸುಮತಿ ಯಾದಪ್ಪನವರ ಹೇಳಿದರು.

ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ  ಮಕ್ಕಳಿಗೆ ಶುಭ ಹಾರೈಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಬಿರಾಜದಾರ ಹಾಗೂ ಅರುಣಾ ಭಟ್‌ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರ ಮೂಲಕ ಶೈಕ್ಷಣಿಕ ವರ್ಷದ ಸಮಗ್ರ ವರದಿ ಮಂಡಿಸಿದರು. ಆರತಿ ಗೋವಿಂದ ಅವರ ಶ್ಲೋಕದೊಂದಿಗೆ ಹಾಗೂ ವಿನಾಯಕನ ನೃತ್ಯ ಸ್ಮರಣೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಡಾ| ಕೆ. ಮೋಹನ್‌, ಗೌರವ ಪ್ರಧಾನ ಕಾರ್ಯದರ್ಶಿ ಪ್ರಮೋದ್‌ ಮುಳಗುಂದ, ಕಾರ್ಯದರ್ಶಿ ಬಿ. ಎಚ್‌. ಕಟ್ಟಿ, ಸಹ ಕಾರ್ಯದರ್ಶಿಗಳಾದ ವಿಜಯ ಕುಲಕರ್ಣಿ, ಎನ್‌. ಎಂ. ಗುಡಿ, ನಿವೃತ್ತ ಪ್ರಾಂಶುಪಾಲರಾದ ನಿರುಪಾ ಜೊರಾಪುರ ಮತ್ತು ಸುವಿನಾ ಶೆಟ್ಟಿ, ಪರಿವೀಕ್ಷಕ ಡಿ. ಆರ್‌. ದೇಶಪಾಂಡೆ, ಶಿಕ್ಷಕರು, ಶಿಕ್ಷಕೇತರ ಸಿಬಂದಿ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶೈಕ್ಷಣಿಕ ಹಾಗೂ ದತ್ತಿ ಬಹುಮಾನ ವಿಜೇತ ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿ ಜ್ಯೋತಿ ಕುಲಕರ್ಣಿ ಹಾಗೂ ಗೌರಿ ದೇಶಪಾಂಡೆ ಓದಿದರು. ತಾಂತ್ರಿಕ ಸಲಹೆಗಾರರಾಗಿ ಜ್ಯೋತಿ ಕುಲಕರ್ಣಿ, ಚೇತನಾ ಬೋಸ್ಲೆ, ಡೋಮಿನಿಕ್‌, ರಜನಿ ಪೂಜಾರಾ ಸಹಕರಿಸಿದರು. ಅಧ್ಯಕ್ಷರ ಪರಿಚಯವನ್ನು ರತ್ನಾ ಕುಲಕರ್ಣಿಯವರು ಮಾಡಿದರೆ, ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿಜೇತರ ಹೆಸರನ್ನು ಅಶ್ವಿ‌ನಿ ಬಂಗೇರಾ ಓದಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ರಂಜಿಸಿದರು. ಸುನೀತಾ ಮಠ ಅವರು ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿದರು. ರಮೇಶ ಚಾನಕೋಟೆ ವಂದಿಸಿದರು.

Advertisement

ಪ್ರೋತ್ಸಾಹ ಕೊಡುವಂತಹ ಮನಸ್ಸುಗಳು ಬೇಕು :

ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷ ಡಾ| ಪಿ. ಎಂ. ಕಾಮತ್‌ ಅವರು ಅತಿಥಿಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಯನ್ನಿತ್ತು ಗೌರವಿಸಿದರು. ಸಂಸ್ಥೆಯ 33ನೇ ವಾರ್ಷಿಕ ಜ್ಞಾನಜ್ಯೋತಿ ಸಂಚಿಕೆಯನ್ನು ಅನಾವರಣಗೊಳಿಸಿ ಮಾತ ನಾಡಿದ ಅವರು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಜ್ಞಾನದ ಕೊರತೆಯಿಲ್ಲ. ಅವರು ಜ್ಞಾನ ತುಂಬಿದ ಅಕ್ಷಯ ಪಾತ್ರೆ. ಆದರೆ ಅವರಿಗೆ ಪ್ರೋತ್ಸಾಹ ಕೊಡುವಂತಹ ಮನಸ್ಸುಗಳು ಬೇಕಾಗಿವೆ. ಅಂತಹ ಅಮೂಲ್ಯವಾದ ಮುತ್ತು-ರತ್ನಗಳನ್ನು ಹುಡುಕಿ ಜ್ಞಾನಾರ್ಜನೆ ಗೊಳಿಸುವ ಕಾರ್ಯವನ್ನು ವಿದ್ಯಾ ಪ್ರಸಾರಕ ಮಂಡಳವು ಪ್ರಾರಂಭದಿಂದಲೂ ಮಾಡಿಕೊಂಡು ಬರು ತ್ತಿದೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಾಯ, ಸಹಕಾರ ಮಾಡಲು ಉದಾರ ಮತ್ತು ವಿಶಾಲ ಮನಸ್ಸುಳ್ಳವರು ಮುಂದೆ ಬರ ಬೇಕು. ಕನ್ನಡ ಮಾಧ್ಯಮದ ಮಕ್ಕಳು ಬಡವರಾಗಿರಬಹುದು, ಆದರೆ ಅವರು ಜ್ಞಾನದ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಮತ್ತು ಪ್ರತಿಭೆ ಹೊಂದಿದ್ದಾರೆ. ಅವರ ಶ್ರೇಯೋಭಿವೃದ್ಧಿಯೇ  ವಿದ್ಯಾ ಪ್ರಸಾರಕ ಮಂಡಳದ ಶೈಕ್ಷಣಿಕ ಕಾರ್ಯಗಳಲ್ಲಿ ಒಂದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next