Advertisement

ರೈತರನ್ನು ಕೋವಿಡ್ ವಾರಿಯರ್ಸ್‍ ಎಂದು ಘೋಷಿಸಿ, ಲಸಿಕೆ ನೀಡಿ: ಹಸಿರು ಸೇನೆ ಆಗ್ರಹ

04:38 PM Jun 01, 2021 | Team Udayavani |

ಶಿಡ್ಲಘಟ್ಟ: ರೈತರನ್ನು ಕೋವಿಡ್ ವಾರಿಯರ್ಸ್‍ಗಳಾಗಿ ಘೋಷಣೆ ಮಾಡಿ ಎಲ್ಲರಿಗೂ ಲಸಿಕೆ ಹಾಕುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಶಿರಸ್ತೇದಾರ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

Advertisement

ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಅವರ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಶಿರಸ್ತೆದಾರ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿ, ದೇಶದ 130 ಕೋಟಿಗೂ ಅಧಿಕ ಜನರಿಗೆ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಆಹಾರವನ್ನು ಪೂರೈಕೆ ಮಾಡುತ್ತಿರುವ ರೈತರನ್ನು ಸಹ ಕೋವಿಡ್ ವಾರಿಯರ್ಸ್ ಎಂದು ಘೋಷಣೆ ಮಾಡಿ ಕೂಡಲೇ ರೈತರು ಮತ್ತು ಅವರ ಮಕ್ಕಳಿಗೂ ಲಸಿಕೆ ನೀಡುವಂತಹ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಪರಿಸ್ಥಿತಿಯಲ್ಲಿ ಅನ್ನದಾತನಾಗಿರುವ ರೈತರು ಮತ್ತು ಅವರ ಮಕ್ಕಳು ಕೋವಿಡ್ ಸೋಂಕು ವ್ಯಾಪಕವಾಗಿದ್ದರು ಸಹ ದೇಶದ 130 ಕೋಟಿಗೂ ಅಧಿಕ ಜನರಿಗೆ ಧವಸಧಾನ್ಯ, ತರಕಾರಿ, ಹಣ್ಣುಹಂಪಲು, ಹಾಲು, ಮೊಟ್ಟೆ, ಮಾಂಸವನ್ನು ಪೂರೈಕೆ ಮಾಡಿ ಹಸಿವು ನೀಗಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಸರ್ಕಾರ ಮೊದಲು ರೈತರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಬೇಕಿತ್ತು. ಅದನ್ನು ಮಾಡಿಲ್ಲ ಈಗಲೂದರೂ ಸಹ ರೈತರನ್ನು ಕೋವಿಡ್ ವಾರಿಯರ್ಸ್‍  ಎಂದು ಘೋಷಣೆ ಮಾಡಿ ರೈತರು ಮತ್ತು ಅವರ ಮಕ್ಕಳಿಗೆ ಲಸಿಕೆ ನೀಡಿ ಅವರ ಆರೋಗ್ಯವನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ತಾದೂರು ಮಂಜುನಾಥ್, ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಶಿಡ್ಲಘಟ್ಟ ನಗರ ಘಟಕದ ಉಪಾಧ್ಯಕ್ಷ ವೈ.ಕೃಷ್ಣಪ್ಪ, ಖಜಾಂಚಿ ಟಿ.ವಿ.ದೇವರಾಜ್, ಶಿಡ್ಲಘಟ್ಟ ತಾಲೂಕು ಸಂಘದ ಗೌರವಾಧ್ಯಕ್ಷ ಬೆಳ್ಳೂಟಿ ತಮ್ಮಣ್ಣ, ಉಪಾಧ್ಯಕ್ಷ ವೀರಾಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸೊಣ್ಣೆನಹಳ್ಳಿ ಕೆಂಪರೆಡ್ಡಿ, ಶಂಕರ್, ಹಯಾತ್‍ ಖಾನ್, ಸುರೇಶ್, ಮಂಜುನಾಥ್, ಸುಭ್ರಮಣಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next