Advertisement
ವಿದ್ಯಾಕಾಶಿ ಆಗಿರುವ ಧಾರಾನಗರಿಯಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಹೆಸರುವಾಸಿ ಆಗಿರುವ ವೈ.ಬಿ.ಅಣ್ಣಿಗೇರಿ ಪದವಿ ಪೂರ್ವ ವಿಜ್ಞಾನ ಮತ್ತು ಮಹಾವಿದ್ಯಾಲಯವನ್ನು ಮುನ್ನಡೆಸುತ್ತಿರುವ ಅಣ್ಣಿಗೇರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪ್ರೊ|ನಾಗೇಶ ಅಣ್ಣಿಗೇರಿಯವರ ನಿಜ ಜೀವನದ ಕಥೆಯಿದು. ಅವಕಾಶ ಸಿಗದಿದ್ದಾಗ ತಾವೇ ಅವಕಾಶ ಸೃಷ್ಟಿಸಿಕೊಂಡು ಅಣ್ಣಿಗೇರಿ ಕ್ಲಾಸಸ್ ಆರಂಭಿಸಿ ಅದರಲ್ಲಿ ಯಶ ಕಂಡ ಪ್ರೊ.ನಾಗೇಶ ಈಗ ದೊಡ್ಡ ಮಹಾವಿದ್ಯಾಲಯ ಮುನ್ನಡೆಸುತ್ತಾ ಇದ್ದಾರೆ.
Related Articles
Advertisement
ದಿನಪತ್ರಿಕೆ, ನಿಯತಕಾಲಿಕೆಗಳು ಹಾಗೂ ಎನ್‌ಸೈಕ್ಲೋಪೀಡಿಯಾ ಗ್ರಂಥಗಳನ್ನು ಒಳಗೊಂಡಿದೆ. ವಿಶಾಲ ಪ್ರಯೋಗಾಲಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಮೂರು ವಿದ್ಯಾರ್ಥಿ ನಿಲಯಗಳಿವೆ. ವಿದ್ಯಾರ್ಥಿಗಳಿಗೆ ಪ್ರತಿ ವಾರಕ್ಕೆ ಒಂದು ಕಿರು ಪರೀಕ್ಷೆ ನಡೆಸುತ್ತಾ ಬಂದಿದ್ದು, ಇದರಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ಯೋಗ ತರಬೇತಿ ಸಹ ಇದೆ. ಐಐಟಿ, ಜೆಇಇ, ನೀಟ್ ಹಾಗೂ ಕೆ-ಸಿಇಟಿ ತರಬೇತಿ ಕೂಡ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ.
ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗಿದೆ. ಆದರೆ ಈ ಭಾಗದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಐಐಟಿ ಬಗ್ಗೆ ಮಾಹಿತಿ ಇಲ್ಲ. ಆದ್ದರಿಂದ ಕರ್ನಾಟಕದ ಜನತೆ ಅದರ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಐಐಟಿ ಫೌಂಡೇಶನ್ ಪ್ರಾರಂಭಿಸಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜೆಇಇ, ಐಐಟಿ, ಎಐಪಿಎಂಟಿ ಕುರಿತು ವಿಶೇಷ ತರಗತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ನೀಡಲಾಗುತ್ತಿದೆ.
ಜ್ಞಾನ ದೇಗುಲ: ಪ್ರೊ.ನಾಗೇಶ ಅವರ ಯಶಸ್ಸಿನ ಹಿಂದೆ ಪತ್ನಿ ರೇಖಾ ಅವರ ಪಾತ್ರ ಸಾಕಷ್ಟಿದೆ. ರೇಖಾ ಅವರು ಈ ಟ್ರಸ್ಟ್‌ನ ಕಾರ್ಯದರ್ಶಿಯೂ ಹೌದು. ಈ ದಂಪತಿಯ ಕನಸಿನ ಕೂಸಾದ ಈ ಮಹಾವಿದ್ಯಾಲಯ ಜ್ಞಾನ ನೀಡುವ ದೇಗುಲವಾಗಿ ನಿರ್ಮಾಣ ಆಗಿದೆ. ಪ್ರತಿ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನೇ ದಾಖಲಿಸಿಕೊಂಡು ಬಂದಿರುವ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಪ್ರತಿಭಾವಂತ ಬಡ ಮಕ್ಕಳ ಏಳ್ಗೆಗೂ ಶ್ರಮಿಸುತ್ತಿದೆ. ಪ್ರತಿ ವರ್ಷ ಐವರು ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾ ಬಂದಿರುವ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪಿಯುಸಿ ಮುಗಿದ ಬಳಿಕ ಅವರ ಉನ್ನತ ವ್ಯಾಸಂಗಕ್ಕೂ ಆರ್ಥಿಕ ನೆರವು ನೀಡುತ್ತಿದೆ.
ಶಿಕ್ಷಣ ವ್ಯಾಪಾರೀಕರಣ ಆಗದೆ ಜ್ಞಾನ ನೀಡುವ ಸಾಧನ ಆಗಬೇಕು. ಅಂಕಗಳಿಗೆ ಆದ್ಯತೆ ನೀಡುವ ಬದಲಾಗಿ ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ದೊರೆತಾಗಲೇ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಸಾಧ್ಯ. ಹೀಗಾಗಿ ನಮ್ಮ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ.-ಪ್ರೊ. ನಾಗೇಶ ಅಣ್ಣಿಗೇರಿ, ಅಧ್ಯಕ್ಷರು, ಅಣ್ಣಿಗೇರಿ ಸೇವಾ ಟ್ರಸ್ಟ್