Advertisement
2014 ಎ. 19ರಂದು ರಾತ್ರಿ 11 ಗಂಟೆಗೆ ಅಣ್ಣಯ್ಯ ಗೌಡರನ್ನು ಅವರ ಮನೆಯಲ್ಲೇ ಹೊಡೆದು ಕೊಲೆ ಮಾಡಲಾಗಿತ್ತು. ಅಮಿತಾ ಮತ್ತು ರುದ್ರೇಶ ನಡುವಿನ ಅನೈತಿಕ ಸಂಬಂಧ ಕೊಲೆಗೆ ಕಾರಣ ಎಂದು ಆರೋಪಿಸ ಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾರದಾ ಬಿ. ಅವರು ಮೇ 4ರಂದು ಆರೋಪ ಸಾಬೀತಾಗಿದೆ ಎಂದು ಆರೋಪಿಗಳನ್ನು ಅಪರಾಧಿಗಳು ಎಂಬುದಾಗಿ ಘೋಷಿಸಿದ್ದರು. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.
ಕೊಲೆ ಕೃತ್ಯ (ಐಪಿಸಿ ಸೆ. 302)ಕ್ಕೆ ಜೀವಾವಧಿ ಶಿಕ್ಷೆ ಮತ್ತು ತಲಾ 50 ಸಾ. ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಸಜೆ, ಕೊಲೆಗೆ ಒಳಸಂಚು (ಐಪಿಸಿ ಸೆಕ್ಷನ್ 120ಎ) ರೂಪಿಸಿದ್ದಕ್ಕೆ ಜೀವಾವಧಿ ಸಜೆ ಮತ್ತು ತಲಾ 50 ಸಾ.ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ವರ್ಷ ಶಿಕ್ಷೆ, ಸಾಕ್ಷ್ಯ ನಾಶ (ಐಪಿಸಿ ಸೆ. 201)ಕ್ಕೆ 2 ವರ್ಷ ಸಾಮಾನ್ಯ ಶಿಕ್ಷೆ ಮತ್ತು ತಲಾ 15 ಸಾ. ರೂ.ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಸಜೆ, ಕೃತ್ಯದ ಬಗ್ಗೆ ತಪ್ಪು ಮಾಹಿತಿ ನೀಡಿರುವುದಕ್ಕೆ(ಐಪಿಸಿ ಸೆ. 203) 1 ವರ್ಷ ಸಾಮಾನ್ಯ ಸಜೆ ಮತ್ತು ತಲಾ 10 ಸಾ. ರೂ. ದಂಡ. ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು.