Advertisement

ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ಸಾರಥ್ಯ

08:44 PM Jul 08, 2021 | Team Udayavani |

ತಮಿಳುನಾಡು : ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ರಾಜ್ಯದ ಬಿಜೆಪಿ ಘಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಅರುಣ್ ಸಿಂಗ್,  ರಾಷ್ಟ್ರೀಯ ಅಧ್ಯಕ್ಷರಾದ ಜೆ. ಪಿ ನಡ್ಡಾ, ಅಣ್ಣಾಮಲೈ ಅವರನ್ನು ತಮಿಳುನಾಡಿನ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಮಾಜಿ ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ನಿನ್ನೆ( ಬುಧವಾರ, ಜುಲೈ 7) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸಚಿವ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಗೊಂಡ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.

ಇದನ್ನೂ ಓದಿ : ಆಕ್ಸಿಜನ್ ದುರಂತ ಮಂಡ್ಯದಲ್ಲಿ ನಡೆದಿದ್ದರೆ ಸರ್ಕಾರವೇ ಬೀಳುತ್ತಿತ್ತು: ಚಲುವರಾಯಸ್ವಾಮಿ

ಐಪಿಎಸ್ ಅಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಕಳದ ವರ್ಷ ಆಗಸ್ಟ್ ನಲ್ಲಿ ತಮಿಳುನಾಡಿನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ರಾಷ್ಟ್ರೀಯ ಬಿಜೆಪಿ ಪ್ರಮುಖ ನಾಯಕರಾದ ಬಿ ಎಲ್ ಸಂತೋಷ್ ಅವರನ್ನು ಒಳಗೊಂಡು ಹಲವರ ನೇರ ಸಂಪರ್ಕ ಹೊಂದಿದ್ದ ಅಣ್ಣಾಮಲೈ, ತಮಿಳುನಾಡು ಬಿಜೆಪಿಗೆ ಸೇರ್ಪಡೆಗೊಂಡ ಕೆಲವೇ ದಿನಗಳಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

Advertisement

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅರಾವಾಕುರುಚಿ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿದ ಅವರು, ಡಿಎಂಕೆಯ ಇಲಂಗೋ ಆರ್. ವಿರುದ್ಧ ವಿರೋಚಿತ ಸೋಲು ಕಂಡಿದ್ದರು.

ಇನ್ನು, ತಮಿಳುನಾಡಿನ ಬಿಜೆಪಿಯ ಹೊಣೆಗಾರಿಕೆಯನ್ನು ಹೈಕಮಾಂಡ್ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಗೆ ಹೊರಿಸಿದ್ದು, 2024 ರ ಲೋಕಸಭಾ ಚುನಾವಣೆಗೆ ಅಣ್ಣಾಮಲೈ ಯಾವ ತಂತ್ರಗಾರಿಕೆಯನ್ನು ಹೆಣೆಯಲಿದ್ದಾರೆ ಎನ್ನುವುದರ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ : ‘ಬಜಾಜ್‌ ಅಲಯನ್ಸ್‌ ಲೈಫ್‌ ಗ್ಯಾರಂಟೀಡ್‌ ಪೆನ್ಶನ್‌ ಗೋಲ್‌’ : ಏನಿದು ಬಜಾಜ್ ಹೊಸ ಯೋಜನೆ ..?

Advertisement

Udayavani is now on Telegram. Click here to join our channel and stay updated with the latest news.

Next