ಪಣಜಿ: ಅನಮೋಡ್ ಘಾಟ್ ಮಾರ್ಗವಾಗಿ ಕರ್ನಾಟಕದಿಂದ ಗೋವಾಕ್ಕೆ ಬರುತ್ತಿದ್ದ ಭಾರೀ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾನಾಪುರದಿಂದ ಅನಮೋಡಕ್ಕೆ ಭಾರಿ ವಾಹನಗಳು ಸಂಚರಿಸುವುದನ್ನು ನಿಷೇಧಿಸಲಾಗಿದೆ. ವಶಪಡಿಸಿಕೊಂಡ ವಾಹನಗಳು ರಾತ್ರಿ ವೇಳೆ ಈ ಮಾರ್ಗವಾಗಿ ಸಾಗುತ್ತಿತ್ತು ಎನ್ನಲಾಗಿದೆ.
ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾನಾಪುರ-ಅನಮೋಡ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುವುದನ್ನು ನಿಷೇಧಿಸಲಾಗಿದೆ.
ಆದರೆ, ಅನಮೋಡ ಘಾಟ್ ಮಾರ್ಗವಾಗಿ ಭಾರಿ ವಾಹನ ಓಡಾಟಕ್ಕೆ ನಿಷೇಧ ಜಾರಿಯಲ್ಲಿದ್ದರೂ ರಾತ್ರಿ ವೇಳೆ ಕೆಲ ಭಾರಿ ವಾಹನಗಳು ಖಾನಾಪುರ ಮಾರ್ಗವಾಗಿ ಅನಮೋಡ್ ಕಡೆಗೆ ಗೋವಾ ಕಡೆಗೆ ಸಂಚರಿಸುತ್ತಿದ್ದವು. 20 ವಾಹನಗಳನ್ನು ಜೋಯಿಡಾ ಸರ್ಕಲ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗ್ರಾಮದೇವಿ ಜಾತ್ರಾ ಮಹೋತ್ಸವ ನಡೆಯುತ್ತಿರುವುದರಿಂದ ಈ ಮಾರ್ಗವಾಗಿ ಗೋವಾಕ್ಕೆ ಭಾರಿ ವಾಹನಗಳ ಓಡಾಟಕ್ಕೆ ಕೊಂಚ ವ್ಯತ್ಯಯವುಂಟಾಗುತ್ತಿರುವ ಹಿನ್ನೆಲೆಯಲ್ಲಿ ಗೋವಾಕ್ಕೆ ತೆರಳುವ ಭಾರಿ ವಾಹನಗಳು ಖಾನಾಪುರ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಪಿರಿಯಾಪಟ್ಟಣ ಚುನಾವಣ ರಣಕಣ : ಶಾಸಕ ಕೆ.ಮಹದೇವ್ v/s ಕೆ. ವೆಂಕಟೇಶ್