Advertisement

ಅಂಕೋಲಾ-ಹುಬ್ಬಳ್ಳಿ ರಸ್ತೆ ಬಂದ್ : ನಾಲ್ಕು ದಿನದಿಂದ ಮುಂದಕ್ಕೆ ಹೋಗದ 700 ವಾಹನಗಳು

07:14 PM Jul 25, 2021 | Team Udayavani |

ಅಂಕೋಲಾ : ಅಂಕೋಲಾ- ಹುಬ್ಬಳ್ಳಿ ಮಾರ್ಗದ ರಾ.ಹೆ ೬೩ ಅರಬೈಲ್‌ ಬಳಿ ಕುಸಿತ ಮತ್ತು ಸುಂಕಸಾಳ ಬಳಿ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿರುವ ಪರಿಣಾಮ ಕಳೆದ ನಾಲ್ಕು ದಿನಗಳಿಂದ 700ಕ್ಕೂ ಹೆಚ್ಚು ಲಾರಿಗಳು ಬಾಳೆಗುಳಿಯಲ್ಲಿ ಬಿಡು ಬಿಟ್ಟಿದೆ.

Advertisement

ಮಂಗಳೂರು, ಕೇರಳಗಳಿಂದ ಸರಕು ತುಂಬಿಕೊಂಡು ಮಹಾರಾಷ್ಟ್ರ, ಆಂದ್ರಪ್ರದೇಶ, ಗುಜರಾತ ಮತ್ತು ಹುಬ್ಬಳ್ಳಿ ಬೆಳಗಾವಿಯತ್ತ ಸಾಗುವ ಲಾರಿಗಳು ಹಟ್ಟಿಕೇರಿಯ ಐಆರ್‌ಬಿ ಟೋಲ್‌ಗೇಟನಿಂದ ಅಂಕೋಲಾ ಅಜ್ಜಿಕಟ್ಟಾದವರೆಗೆ ಸುಮಾರು 10 ದೂರದವರೆಗೆ ಸಾಲಾಗಿ ನಿಂತುಕೊಂಡಿವೆ.

ರಸ್ತೆ ಬೇಗನೆ ಸಂಚಾರಕ್ಕೆ ಮುಕ್ತವಾಗದಿದ್ದರೆ ವಾಣಿಜ್ಯೋದ್ಯಮದ ಮೇಲೆ ಭಾರಿ ಪರಿಣಾಮ ಬೀರಲಿದೆ. ಅನಿಲ ಟ್ಯಾಂಟಕರ್ ಗಳು ಹಾಗೂ ಇತರ ವಸ್ತುಗಳ ಲಾರಿಗಳು ನಡುರಸ್ತೆಯಲ್ಲಿ ಸಿಲುಕಿಕೊಂಡಿವೆ. ಮುಂದಿನ ಒಂದು ವಾರವಾದರು ಈ ಹೆದ್ದಾರಿ ಆರಂಭವಾಗುವುದು ಕಷ್ಟಸಾದ್ಯ ಎಂದು ರಾ.ಹೆ ಇಲಾಖೆ ಅಧಿಕಾರಿಗಳು ಹೆಳುತ್ತಿದ್ದಾರೆ.

ಇಲ್ಲಿ ನಿಲ್ಲಿಸಿಟ್ಟ ಲಾರಿಯ ಚಾಲಕ ಮತ್ತು ಕ್ಲೀನರಗಳು ಲಾರಿಯಲ್ಲಿಯೆ ಅಡುಗೆ ಮಾಡಿ ಉಟ ಮಾಡುತ್ತಿದ್ದರೆ ಇನ್ನೂ ಕೆಲವರು ಹೊಟೇಲಗಳಲ್ಲಿ ಉಟ ಮಾಡುತ್ತಿದ್ದಾರೆ. ನಾಲ್ಕು ದಿನಗಳಿಂದ ಲಾರಿ ನಿಲ್ಲಿಸಿಕೊಂಡು ಹೆದ್ದಾರಿ ಮೇಲೆ ವಾಸ್ತವ್ಯ ಮಾಡಿರುವುದರಿಂದ ಒಂದೆರಡು ದಿನಕ್ಕೆ ಆಗುವಷ್ಟು ತಂದಿರುವ ಅಕ್ಕಿ ಬೆಳೆ ಮತ್ತು ಕೈಯಲ್ಲಿರುವ ಹಣವು ಕಾಲಿ ಆಗಿದೆ. ನಾವು ಉಪವಾಸ ಉಳಿಯುವ ಸ್ಥಿತಿ ಬಂದೋದಗಿದೆ. ಎಂದು ಲಾರಿ ಚಾಲಕರು ಹೇಳಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next