Advertisement
ಗೋಲ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದ ಭನ್ವಾಲ ಅರ್ಹತಾ ಸುತ್ತಿನಲ್ಲಿ ನಿರ್ವಹಣೆಯನ್ನು ಪುನರಾವರ್ತಿಸಲು ವಿಫಲರಾಗಿ ಫೈನಲ್ ಹಂತಕ್ಕೇರಲು ಅರ್ಹತೆ ಗಳಿಸಲಿಲ್ಲ. ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ ಅವರು ಶ್ರೇಷ್ಠ ನಿರ್ವಹಣೆ ನೀಡಿದ್ದರು. ಆದರೆ ದ್ವಿತೀಯ ಹಂತದಲ್ಲಿ ಒಟ್ಟಾರೆ 576 ಅಂಕ ಗಳಿಸಿ 9ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿ ಹೊರಬಿದ್ದರು. ಭಾರತದ ಇನ್ನೋರ್ವ ಸ್ಪರ್ಧಿ ಶಿವಂ ಶುಕ್ಲ 11ನೇ ಸ್ಥಾನ ಪಡೆದರು. ಅಗ್ರ ಆರು ಮಂದಿ ಮಾತ್ರ ಫೈನಲಿಗೆ ಅರ್ಹತೆ ಗಳಿಸಿದ್ದು ಚೀನದ ಝವೊನನ್ ಯವೊ ಗೇಮ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದರು.
ಅನುಭವಿ ಶೂಟರ್‌ಗಳಿಂದ ಭಾರತ ಪದಕ ಗೆಲ್ಲುವ ನಿರೀಕ್ಷೆ ಮಾಡಿಲ್ಲ. ಆದರೆ ಹದಿಹರೆಯದ ಇನ್ನೂ ಶಾಲೆಗೆ ಹೋಗುತ್ತಿರುವ ಶೂಟರ್‌ಗಳಿಂದ ಪದಕದ ನಿರೀಕ್ಷೆ ಮಾಡಿರುವುದು ಅವರ ನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಶೂಟಿಂಗ್‌ನಲ್ಲಿ 4 ಮಂದಿ ಹದಿಹರೆಯದ ಶೂಟರ್‌ಗಳು ಭಾಗವಹಿಸಿದ್ದು ಅನೀಶ್ ಮತ್ತು ಮನು ಭಾಕರ್ ನಿರಾಸೆ ಮೂಡಿಸಿದ್ದಾರೆ. ಆದರೆ 16ರ ಹರೆಯದ ಸೌರಭ್ ಚೌಧರಿ ಮತ್ತು 15ರ ಹರೆಯದ ಶಾದೂìಲ್ ವಿಹಾನ್ ಅನುಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದರು.