Advertisement

2ರಿಂದ ಜಮಖಂಡಿಯಲ್ಲಿ ಜಾನುವಾರು ಜಾತ್ರೆ

12:25 PM Mar 23, 2022 | Team Udayavani |

ಜಮಖಂಡಿ: ನಗರದ ರಾಜ್ಯ ಹೆದ್ದಾರಿ ಮುಧೋಳ ರಸ್ತೆ ಹೊರವಲಯದಲ್ಲಿ ಐತಿಹಾಸಿಕ ಬಸವೇಶ್ವರ ಅಮರಾಯಿ ಜಾನುವಾರುಗಳ ಜಾತ್ರೆ ಏ. 2ರಿಂದ 4ರವರೆಗೆ ಸಂಭ್ರಮದಿಂದ ನಡೆಯಲಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

Advertisement

ನಗರದ ತಾಲೂಕು ಆಡಳಿತ ಸೌಧ ಸಭಾಭವನದಲ್ಲಿ ಬಸವೇಶ್ವರ ಅಮರಾಯಿ ಜಾನುವಾರುಗಳ ಜಾತ್ರೆ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏ.2 ರಿಂದ 4ರವರೆಗೆ ತೆರಬಂಡಿ ಸ್ಪರ್ಧೆ, ಎತ್ತಿನ ಗಾಡಿ ಓಟದ ಸ್ಪರ್ಧೆ, ಜೋಡೆತ್ತು ಕಲ್ಲು ಜಗ್ಗುವ ಸ್ಪರ್ಧೆ ಹಾಗೂ ರಾಸುಗಳ ಆಯ್ಕೆ ಸ್ಪರ್ಧೆಗಳು ಜರುಗಲಿವೆ. ಐತಿಹಾಸಿಕ ಅಮರಾಯಿ ಜಾತ್ರೆಯಲ್ಲಿ ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳಿಂದ ಉತ್ತಮ ತಳಿಯ ರಾಸುಗಳು ಮಾರಾಟ ಕೂಡ ನಡೆಯಲಿದೆ.

ಸಂಭ್ರಮದಿಂದ ಐತಿಹಾಸಿಕ ಅಮರಾಯಿ ಜಾನುವಾರು ಜಾತ್ರೆ ನಿಮಿತ್ತ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಭೆಗೆ ಆಗಮಿಸುವಂತೆ ನೋಟಿಸ್‌ ನೀಡಿದರೂ ಗೈರಾಗಿರುವುದಕ್ಕೆ ಶಾಸಕ ಆನಂದ ನ್ಯಾಮಗೌಡ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆ ಯಶಸ್ವಿಗಾಗಿ ಪೂರಕ ಸಮಿತಿಗಳು ಸಿದ್ಧತೆ ಆರಂಭಿಸಬೇಕು ಎಂದು ಸೂಚನೆ ನೀಡಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳಿಗೆ ನಗದು ಬಹುಮಾನ ವಿತರಣೆ ನಡೆಯಲಿದೆ. ಜಾನುವಾರು ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಎಲ್ಲರಿಗೂ ಒಪ್ಪಿಸಿರುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದೂರದ ಊರಿನಿಂದ ಬರುವ ರೈತರಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಔಷಧೋಪಚಾರದ ವ್ಯವಸ್ಥೆ ಆರೋಗ್ಯ ಇಲಾಖೆಗೆ ವಹಿಸಬೇಕು. ಪಶು ವೈದ್ಯರು, ಆರೋಗ್ಯ ಇಲಾಖೆಯವರು ಜಾತ್ರೆಯಲ್ಲಿ ವೈದ್ಯರು 24 ಗಂಟೆ ಸೇವೆಗೆ ನಿಯೋಜಿಸಬೇಕು. ರಾಜ್ಯ ಹೆದ್ದಾರಿ ನಡೆಯುವುದರಿಂದ ಪೊಲೀಸ್‌ ಇಲಾಖೆ ತಾತ್ಕಾಲಿಕ ಪೊಲೀಸ್‌ ಠಾಣೆ ಸ್ಥಾಪಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಜನ-ಜಾನುವಾರುಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ನಿರ್ಮಿಸಿ ವಸ್ತು ಪ್ರದರ್ಶನ ಆಯೋಜಿಸಬೇಕು.

Advertisement

ಇದೇ ಸಂದರ್ಭದಲ್ಲಿ ಪ್ರಸಕ್ತ ವರ್ಷದ ಜಾತ್ರಾ ಕಮೀಟಿ ಸದಸ್ಯರ ಆಯ್ಕೆ ನಡೆಯಿತು. ಐತಿಹಾಸಿಕ ಶ್ರೀ ಬಸವೇಶ್ವರ ಅಮರಾಯಿ ಜಾನುವಾರು ಕಮೀಟಿಯ ಅಧ್ಯಕ್ಷರಾಗಿ ನಂದೆಪ್ಪ ನ್ಯಾಮಗೌಡ, ಉಪಾಧ್ಯಕ್ಷ ಬಸವರಾಜ ಗುಡ್ಡಮನಿ ಆಯ್ಕೆಗೊಂಡರು.

ನಗರಸಭೆ ಅಧ್ಯಕ್ಷ ಸಿದ್ದು ಮೀಸಿ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ತಾಪಂ ಅಧಿಕಾರಿ ಶ್ರವಣ ನಾಯಕ, ಅರ್ಬನ್‌ ಬ್ಯಾಂಕ್‌ ನಿರ್ದೇಶಕ ಫಕೀರಸಾಬ ಬಾಗವಾನ, ಕೆ.ಕೆ.ತುಪ್ಪದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next