Advertisement

Black Flag: SFI ಕಾರ್ಯಕರ್ತರ ಬಂಧನಕ್ಕೆ ಒತ್ತಾಯಿಸಿ ರಸ್ತೆ ಬದಿ ಧರಣಿ ಕೂತ ರಾಜ್ಯಪಾಲರು

01:29 PM Jan 27, 2024 | Team Udayavani |

ಕೊಲ್ಲಂ: ಕೇರಳದಲ್ಲಿ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎಸ್‌ಎಫ್‌ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ ಕಾರಣಕ್ಕೆ ಸಿಟ್ಟುಗೊಂಡ ರಾಜ್ಯಪಾಲ ಆರಿಫ್ ಮೊಹಮ್ಮದ್ ಅವರು ಕಾರಿನಿಂದ ಇಳಿದು ರಸ್ತೆ ಬದಿಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

Advertisement

ಕೇರಳದಲ್ಲಿ ನಡೆಯುತಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭ ರಸ್ತೆ ಬದಿಯಲ್ಲಿ ನಿಂತಿದ್ದ ಎಸ್‌ಎಫ್‌ಐ ಕಾರ್ಯಕರ್ತರು ರಾಜ್ಯಪಾಲರ ಕಾರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಬಳಿಕ ಗೋ ಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ ಇದರಿಂದ ಕೋಪಗೊಂಡ ರಾಜ್ಯಪಾಲರು ಕಾರನ್ನು ನಿಲ್ಲಿಸಿ ರಸ್ತೆಬದಿಯಲ್ಲೇ ಕುಳಿತು ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿ ಧರಣಿ ಕುಳಿತರು. ಅಲ್ಲದೆ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಎಸ್‌ಎಫ್‌ಐ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೂ ಛೀಮಾರಿ ಹಾಕಿದ್ದಾರೆ.

ಅಲ್ಲದೆ ಘಟನೆಯ ಕುರಿತು ಕೇಂದ್ರ ಗೃಹ ಸಚಿವರಿಗೆ ಕರೆ ಮಾಡಿ ಇಲ್ಲದಿದ್ದರೆ ಪ್ರಧಾನಿಗೆ ಕರೆ ಮಾಡುವಂತೆ ತಮ್ಮ ಅಧಿಕಾರಿಗಳಿಗೆ ರಾಜ್ಯಪಾಲರು ಕೇಳಿಕೊಂಡಿದ್ದಾರೆ.

ಈ ಗದ್ದಲದ ಬಗ್ಗೆ ಎಸ್‌ಎಫ್‌ಐ ಕಾರ್ಯಕರ್ತರೊಬ್ಬರು ಮಾತನಾಡಿ, ಯಾವುದೇ ಅರ್ಹತೆ ಇಲ್ಲದೇ ಬಿಜೆಪಿ ಕಚೇರಿಯಿಂದ ಶಿಫಾರಸು ಪಡೆದು ಸುರೇಂದ್ರನ್ ಅವರನ್ನು ಮತ್ತೆ ಸೆನೆಟ್‌ಗೆ ಕರೆದೊಯ್ಯಲಾಗಿದೆ. ಹಾಗಾಗಿ ಎಸ್‌ಎಫ್‌ಐ ಕಳೆದ ಹಲವು ತಿಂಗಳಿಂದ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ನಾವು ಯಾವುದೇ ರಾಜಿಗೆ ಸಿದ್ಧರಿಲ್ಲ. ಅವರು ನಮ್ಮನ್ನು “ಅಪರಾಧಿಗಳು” ಎಂದು ಕರೆದರು, ಆದ್ದರಿಂದ ನಾವು ರಾಜ್ಯಾದ್ಯಂತ ಪ್ರತಿಭಟನೆ ಮಾಡುವ ಮೂಲಕ ನಮ್ಮ ಪ್ರತಿಭಟನೆಯ ಶಕ್ತಿಯನ್ನು ಅವರಿಗೆ ತೋರಿಸುತ್ತೇವೆ. ಎಸ್‌ಎಫ್‌ಐ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸಲು ಬಯಸುತ್ತೇವೆ ಎಂದು ಹೇಳಿದರು.

13 ಜನರ ವಿರುದ್ಧ ಪ್ರಕರಣ
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಇದೀಗ 13 ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 143, 144, 147, 283, 353, 124, 149 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next