Advertisement

ಆನೆಗುಂದಿ:ಜಯತೀರ್ಥ,ರಘುವರ್ಯ ತೀರ್ಥರ ಮಹಿಮೋತ್ಸವಕ್ಕೆ ನಿರಾಕರಣೆ

09:01 PM Jun 28, 2023 | Team Udayavani |

ಗಂಗಾವತಿ:ತಾಲೂಕಿನ ಆನೆಗೊಂದಿ ಇತಿಹಾಸ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಜು.06-08 ವರೆಗೆ ಮೂರು ದಿನಗಳ ಕಾಲ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ವತಿಯಿಂದ ಜಯತೀರ್ಥರ ಆರಾಧನೆ ಮತ್ತು ಅದೇ ದಿವಸಗಳಂದು ಉತ್ತರಾಧಿಮಠದವರು ರಘುವರ್ಯ ತೀರ್ಥರ ಮಹಿಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯ ಪರವಾನಿಗೆ ಮತ್ತು ಭದ್ರತೆ ನೀಡುವಂತೆ ಕೋರಲಾಗಿದ್ದು ನವವೃಂದಾವನಗಡ್ಡಿಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವರದಿ ಹಿನ್ನೆಲೆಯಲ್ಲಿ ಆರಾಧನೆ ಮತ್ತು ಮಹಿಮೋತ್ಸವ ಮಾಡಲು ಪರವಾನಿಗೆಯನ್ನು ನಿರಾಕರಿಸಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

Advertisement

ಮಂತ್ರಾಲಯ ಮಠ ಹಾಗೂ ಉತ್ತರಾಧಿಮಠದವರು ಒಂದೇ ದಿನದಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಾವುದೇ ರೀತಿಯ ಅವಗಡ ಜರುಗದಂತೆ ನಿಯಮಾನುಸಾರ ಕ್ರಮವಹಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಎರಡು ಮಠದವರನ್ನು ಕರೆದು ಸಭೆ ನಡೆಸಿದ ಸಂದರ್ಭದಲ್ಲಿ ಉಭಯ ಮಠದವರು ಒಂದೇ ದಿನದಂದು ಇಬ್ಬರೂ ಸೇರಿ ಪರಸ್ಪರ ಒಪ್ಪಿಕೊಂಡು ಸಮನ್ವಯ ಸಾಧಿಸಿ ಸದ್ರಿ ಕಾರ್ಯಕ್ರಮಗಳನ್ನು ಆಚರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ವರದಿಯಲ್ಲಿ ಎರಡೂ ಮಠದವರಿಗೆ ಒಂದೇ ದಿನದಂದು ಅವಕಾಶ ನೀಡಿದಲ್ಲಿ ಉಭಯ ಮಠದವರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆಗಳು ಇರುವುದರಿಂದ ಎರಡೂ ಮಠದವರಿಗೆ ಒಂದೇ ದಿನಾಂಕಗಳಂದು ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲು ಅವಕಾಶ ನೀಡದಂತೆ ವರದಿ ನೀಡಿರುವುದರಿಂದ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಸಲುವಾಗಿ ಜು.06-08 ವರೆಗೆ ನವವೃಂದಾವನಗಡ್ಡಿಯಲ್ಲಿ ರಘುವರ್ಯ ತೀರ್ಥರ ಮಹಿಮೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಜಯತೀರ್ಥರ ಆರಾಧನೆಯನ್ನು ಆಚರಿಸುವ ಕುರಿತು ಎರಡು ಮಠದವರು ಸಲ್ಲಿಸಿರುವ ಎರಡೂ ಮಠದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next