Advertisement
ಈ ದೀಕ್ಷೆಯ ಭಾಗವಾಗಿ, ಪವನ್ ಕಲ್ಯಾಣ್ 11 ದಿನಗಳವರೆಗೆ ಕೇವಲ ಹಾಲು, ಹಣ್ಣುಗಳು ಮತ್ತು ಇತರ ದ್ರವ ಆಹಾರಗಳ ಮಾತ್ರವೇ ಸೇವಿಸುತ್ತಾರೆ. ಗಮನಾರ್ಹವೆಂದರೆ ಕಳೆದ ವರ್ಷ ಜೂನ್ ನಲ್ಲಿ ಪವನ್ ವಾರಾಹಿ ವಿಜಯ ಯಾತ್ರೆ ಕೈಗೊಂಡು ಅಮ್ಮನವರಿಗೆ ಪೂಜೆ ಸಲ್ಲಿಸಿದ್ದು ಸುದ್ದಿಯಾಗಿತ್ತು. ಈ ಬಾರಿ ಪವನ್ ಡಿಸಿಎಂ ಆಗಿ ದೀಕ್ಷೆ ಪಡೆಯುತ್ತಿರುವುದು ವಿಶೇಷವಾಗಿದೆ.
Related Articles
Advertisement
ಈಗ ದೀಕ್ಷೆ ಉದ್ದೇಶವೇನು? ಡಿಸಿಎಂ ಪವನ್ ಕಲ್ಯಾಣ್ ಈ ಬಾರಿ ದೀಕ್ಷೆಯ ಪಡೆದಿರುವುದು ವಾರಾಹಿ ಮಾತೆ ಆಶೀರ್ವಾದ ಹಾಗೂ ಆಂಧ್ರದ ಜನರ ಕಲ್ಯಾಣ, ಸಮೃದ್ಧಿ, ಅಭಿವೃದ್ಧಿಗಾಗಿ ಈ ದೀಕ್ಷೆ ಕೈಗೊಂಡಿದ್ದಾರೆ. ವಾರಾಹಿ ಮಾತೆ ವಿಶೇಷತೆ ಏನು? ವಾರಾಹಿ ಮಾತೆ ಸಪ್ತಮಾತೃಕೆಯರಲ್ಲಿ ಒಬ್ಬರು. ಈಕೆ ಲಲಿತಾ ಪರಮೇಶ್ವರಿ, ಸರ್ವ ಸೈನ್ಯಾಧಕ್ಷೆ. ಮಹಾಲಕ್ಷ್ಮಿ ಪ್ರತಿರೂಪ, ದೇವಿಯು ದುಷ್ಟ ಶಿಕ್ಷಣ ಮತ್ತು ಶಿಷ್ಟ ರಕ್ಷಣೆಗಾಗಿ ಮತ್ತು ಸದ್ಗುಣ ರಕ್ಷಣೆಗಾಗಿ ಸದಾ ಶಸ್ತ್ರಸಜ್ಜಿತಳಾಗಿರುತ್ತಾಳೆ. ದೇವಿಯು ಉಗ್ರವಾಗಿ ಕಂಡರೂ, ತುಂಬಾ ಕರುಣಾಮಯಿ. ವಾರಾಹಿ ಮಾತಾ ಭೂದೇವಿಯು ನೇಗಿಲು ಧರಿಸಿರುವ ಧಾನ್ಯ ದೇವತೆಯೂ ಹೌದು. ಉತ್ತಮ ಫಸಲು ಮತ್ತು ಉತ್ತಮ ಕೃಷಿಗಾಗಿ ಎಲ್ಲ ರೈತರು ವಾರಾಹಿ ಮಾತೆಯ ಪೂಜಿಸುತ್ತಾರೆ.